ನ್ಯೂಸ್ ನಾಟೌಟ್: ಕೂಲಿ ಕೆಲಸ ಮಾಡಿಕೊಂಡು ಸುಳ್ಯ ಪರಿಸರದಲ್ಲಿ ಬದುಕುತ್ತಿದ್ದ ನವವಿವಾಹಿತೆ ದಾವಣೆಗೆರೆ ಜಿಲ್ಲೆಯ ಚೆನ್ನಗಿರಿಯ ಮಂಗಳ ಯಾನೆ ಕಾವ್ಯಾ (28 ವರ್ಷ) ನ.20 ರಂದು ನಾಪತ್ತೆಯಾಗಿದ್ದಾರೆ.
ಈಕೆಗಾಗಿ ಹುಡುಕಾಡಿ ಸುಸ್ತಾಗಿರುವ ಪತಿ ಇದೀಗ ಸುಳ್ಯ ಪೊಲೀಸ್ ಠಾಣೆಯಲ್ಲಿ ಪತ್ನಿಯನ್ನು ಹುಡುಕಿಕೊಡುವಂತೆ ದೂರು ನೀಡಿದ್ದಾರೆ. ವಿಕ್ರಂ ಎನ್ನುವ ವ್ಯಕ್ತಿಯನ್ನು ಮನೆಯವರ ಒಪ್ಪಿಗೆ ಮೇರೆಗೆ ನ.7ರಂದು ಕಾವ್ಯಾ ಮದುವೆಯಾಗಿದ್ದರು. ನ.20ರಂದು ಈಕೆ ಬ್ಯೂಟಿ ಪಾರ್ಲರ್ ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟು ಇದುವರೆಗೆ ಹಿಂತಿರುಗಿ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
Click