ನ್ಯೂಸ್ ನಾಟೌಟ್: ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಮಾನವಿಕ ಸಂಘದ ವತಿಯಿಂದ ಗುರುವಾರ (ನ. 28 ) ಶೈಕ್ಷಣಿಕ ಅಧ್ಯಯನ ಭೇಟಿ ಕಾರ್ಯಕ್ರಮದ ಪ್ರಯುಕ್ತ ಸುಳ್ಯದ ಪೊಲೀಸ್ ಠಾಣೆಗೆ ಭೇಟಿ ಆಯೋಜಿಸಲಾಗಿತ್ತು.
ಕಲಾವಿಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ವಿಷಯಕ್ಕೆ ಪೂರಕವಾಗಿ ಭೇಟಿ ಏರ್ಪಡಿಸಲಾಯಿತು. ಸುಳ್ಯ ಠಾಣೆಯ ಪಿ.ಎಸ್.ಐ ಸಂತೋಷ್ ಬಿ.ಪಿ ಇವರು ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಬಗ್ಗೆ ಮುಖ್ಯವಾಗಿ ಸೈಬರ್ ಕ್ರೈಂ ಎಫ್.ಐ.ಆರ್ , ಪೊಲೀಸ್ ಠಾಣೆಯ ಆಡಳಿತ ವ್ಯವಸ್ಥೆ, ನೇಮಕಾತಿ, ಸಂಚಾರಿ ನಿಯಮ ಇತ್ಯಾದಿ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ವಿವಿಧ ಪ್ರಶ್ನೆಯನ್ನು ಕೇಳುವ ಮೂಲಕ ಚರ್ಚೆಯಲ್ಲಿ ಪಾಲ್ಗೊಂಡರು.
ಶೈಕ್ಷಣಿಕ ಭೇಟಿಯ ನೇತೃತ್ವವನ್ನು ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಮಮತಾ.ಕೆ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ವಿಷ್ಣು ಪ್ರಶಾಂತ್ ಬಿ. ಮತ್ತು ಸಹಾಯಕ ಪ್ರಾಧ್ಯಾಪಕ ಗಿರೀಶ್, ಇತಿಹಾಸ ವಿಭಾಗದ ಲತೀಶ್ಕುಮಾರ್ ವಹಿಸಿದ್ದರು. ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿ ಸಹಕಾರ ನೀಡಿದ್ದರು.