ನ್ಯೂಸ್ ನಾಟೌಟ್: ಜೈಲಿನಿಂದ ಬಿಡುಗಡೆಗೊಂಡ ಖುಷಿಯಲ್ಲಿ ಯುವಕನೊಬ್ಬ ಖುಷಿಯಲ್ಲಿ ಜೈಲು ಅಧಿಕಾರಿಗಳ ಎದುರೇ ಬ್ರೇಕ್ ಡಾನ್ಸ್ ಮಾಡಿದ್ದು ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಸಲಿಗೆ ಉತ್ತರ ಪ್ರದೇಶದ ಛಿಬ್ರಮೌ ನಿವಾಸಿಯಾಗಿರುವ ಶಿವ ಎಂಬ ಯುವಕ ಸಣ್ಣ ಪ್ರಕರಣವೊಂದಕ್ಕೆ ಸಂಬಂಧಿಸಿ ಜೈಲು ಸೇರಿದ್ದ ಎನ್ನಲಾಗಿದೆ. ಬಡ ಕುಟುಂಬದಿಂದ ಬಂದಿದ್ದರಿಂದ ದಂಡ ಕಟ್ಟಲಾಗದೆ ಈತನಿಗೆ ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ. ಹಾಗಾಗಿ ಬರೋಬ್ಬರಿ ಹನ್ನೊಂದು ತಿಂಗಳ ಕಾಲ ಜೈಲುವಾಸ ಅನುಭವಿಸಬೇಕಾಗಿ ಬಂತು. ಕೊನೆಗೂ ಈತನಿಗೆ ಬಿಡುಗಡೆ ಭಾಗ್ಯ ಸಿಕ್ಕಿತು ಈ ವಿಚಾರ ಗೊತ್ತಾಗುತ್ತಿದ್ದಂತೆ ಖುಷಿಗೆ ಜೈಲಿನ ಗೇಟ್ ನಿಂದ ಹೊರಗೆ ಬರುತ್ತಿದ್ದಂತೆ ಅಲ್ಲಿದ್ದ ಜೈಲು ಅಧಿಕಾರಿಗಳ ಎದುರೇ ಡಾನ್ಸ್ ಮಾಡಿದ್ದಾನೆ. ಅಲ್ಲದೆ ಯುವಕನ ಕಾರ್ಯಕ್ಕೆ ಜೈಲು ಅಧಿಕಾರಿಗಳು ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆಯನ್ನು ಸೂಚಿಸಿದ್ದಾರೆ.