ನ್ಯೂಸ್ ನಾಟೌಟ್ : 2008 ನವೆಂಬರ್ 26ರಂದು ಲಷ್ಕರ್ ಇ ತೊಯ್ಬಾ ಭಯೋತ್ಪಾದಕರು ಮುಂಬೈ ದಾಳಿ ನಡೆಸಿದ ಕರಾಳ ನೆನಪಿಗೆ ಇಂದಿಗೆ (ನ.26) ಬರೋಬ್ಬರಿ 16 ವರ್ಷವಾಗಿದೆ. ಅಂದಿನ ಕಾರ್ಯಾಚರಣೆಯಲ್ಲಿ ಹುತಾತ್ಮರಾದವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.
ಅಂದು ಲಷ್ಕರ್ ಉಗ್ರರು ತಾಜ್ ಹೋಟೆಲ್, ಒಬೆರಾಯ್ ಟ್ರೈಡೆಂಟ್ ಹೋಟೆಲ್, ಛತ್ರಪತಿ ಶಿವಾಜಿ ಟರ್ಮಿನಸ್, ಲಿಯೋಪೋಲ್ಡ್ ಕೆಫೆ, ಮುಂಬೈ ಛಾಬಾದ್ ಹೌಸ್, ನಾರಿಮನ್ ಹೌಸ್, ಕಾಮಾ ಆಸ್ಪತ್ರೆ ಹಾಗೂ ಮೆಟ್ರೋ ಸಿನಿಮಾ ಗುರಿಯಾಗಿರಿಸಿ ದಾಳಿ ನಡೆಸಿದ್ದರು.
ಉಗ್ರರ ದಾಳಿಯಲ್ಲಿ 20 ಮಂದಿ ಭದ್ರತಾ ಸಿಬ್ಬಂದಿಗಳು, 26 ವಿದೇಶಿಯರು ಸೇರಿದಂತೆ 166 ಮಂದಿ ಕೊನೆಯುಸಿರೆಳೆದಿದ್ದು. ಸುಮಾರು 300ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. 2008ರ ನವೆಂಬರ್ 26ರಂದು ಪಾಕಿಸ್ತಾನದ 10 ಉಗ್ರರು ಬೋಟ್ ಮೂಲಕ ಸಮುದ್ರ ಮಾರ್ಗವಾಗಿ ಬಂದು ವ್ಯವಸ್ಥಿತವಾಗಿ ದಾಳಿ ನಡೆಸಿದ್ದರು.
ನೂರಾರು ಮಂದಿಯ ಜೀವ ಉಳಿಸಿ ಹುತಾತ್ಮರಾದ ಭದ್ರತಾ ಸಿಬ್ಬಂದಿಗಳ ಶೌರ್ಯ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಹೇಳಿ, ಹುತಾತ್ಮರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
Click