ನ್ಯೂಸ್ ನಾಟೌಟ್: ಬಿಜೆಪಿಯಲ್ಲಿ ಬಣ ಬಡಿದಾಟ ಹೆಚ್ಚಾಗಿದ್ದು, ಇಂದಿನಿಂದ ವಕ್ಫ್ ವಿರೋಧಿ ರಾಜ್ಯ ಪ್ರವಾಸ ಕೈಗೊಂಡಿರುವ ಶಾಸನ ಬಸನಗೌಡ ಪಾಟೀಲ್ ಯತ್ನಾಳ್ ತಂಡಕ್ಕೆ ಬಿಜೆಪಿಯಿಂದ ಪೊಲೀಸ್ ದೂರು ನೀಡುವ ಮೂಲಕ ಶಾಕ್ ಕೊಡಲಾಗಿದೆ.
ಪಕ್ಷದಿಂದಲೂ ಯತ್ನಾಳ್ ತಂಡದ ವಿರುದ್ಧ ಹೈಕಮಾಂಡ್ ಗೆ ದೂರು ಕೊಡಲು ನಿರ್ಧರಿಸಲಾಗಿದೆ ಎಂದು ವರದಿ ತಿಳಿಸಿದೆ. ವಕ್ಫ್ ಹೋರಾಟದಲ್ಲಿ ಬಿಜೆಪಿಯ ಎರಡು ಬಣಗಳ ಆಂತರಿಕ ಕಚ್ಚಾಟ ಬೀದಿಗೆ ಬಂದಿದೆ. ವಕ್ಫ್ ಭೂಕಬಳಿಕೆ ವಿರೋಧಿಸಿ ಇಂದಿನಿಂದ ಬೀದರ್ ನಿಂದ ಪ್ರವಾಸ ಹೊರಟ ಯತ್ನಾಳ್/ ರಮೇಶ್ ಜಾರಕಿಹೊಳಿ ತಂಡಕ್ಕೆ ವಿಜಯೇಂದ್ರ ತಂಡ ತಿರುಗೇಟು ನೀಡಿದೆ.
ಬಿಜೆಪಿ ಚಿಹ್ನೆಯಡಿ ವಕ್ಫ್ ಹೋರಾಟ ಮಾಡುತ್ತಿರುವ ಯತ್ನಾಳ್ ಆ್ಯಂಡ್ ಟೀಂ ಮೇಲೆ ಬೀದರ್ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಪೊಲೀಸ್ ಅಧೀಕ್ಷಕರಿಗೆ ಲಿಖಿತ ದೂರು ನೀಡಿದ್ದಾರೆ. ಯಾರೋ ಅನಾಮಿಕರು ಬೀದರ್ ನಗರಾದ್ಯಂತ ಬಿಜೆಪಿ ಚಿಹ್ನೆ ಬ್ಯಾನರ್ ಗಳನ್ನು ಹಾಕಿದ್ದಾರೆ. ಜಿಲ್ಲಾಧ್ಯಕ್ಷನಾದ ನನಗೆ ಯಾವುದೇ ಮಾಹಿತಿ ನೀಡದೇ ಬಿಜೆಪಿ ಚಿಹ್ನೆ ಬಳಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಗರದಲ್ಲಿ ಬ್ಯಾನರ್ ಹಾಗೂ ಫ್ಲೆಕ್ಸ್ ಗಳನ್ನು ಹಾಕಲು ನಗರ ಸಭೆಯಿಂದ ಅನುಮತಿ ನೀಡದೇ ಇದ್ದರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಇತ್ತ ಯತ್ನಾಳ್ ವಿರುದ್ಧದ ಪೊಲೀಸ್ ದೂರನ್ನು ಪಕ್ಷವೂ ಸಮರ್ಥಿಸಿಕೊಂಡಿದೆ. ಜತೆಗೆ ಯತ್ನಾಳ್ ಅಂಡ್ ಟೀಮ್ ವಿರುದ್ಧ ಬಿಜೆಪಿ ಪಕ್ಷದಿಂದಲೂ ಕ್ರಮಕ್ಕೆ ಕೋರಿ ರಾಷ್ಟ್ರೀಯ ಬಿಜೆಪಿಗೆ ದೂರು ಕೊಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.
Click