ನ್ಯೂಸ್ ನಾಟೌಟ್: ಪೊಲೀಸರಿಗೆ ಹೆದರಿ ಕದ್ದ ಚಿನ್ನಾಭರಣಗಳನ್ನು ಕಳ್ಳರು ವಾಪಾಸ್ ಇಟ್ಟು ಹೋಗಿರುವ ಘಟನೆ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಇಂದು(ನ.25) ನಡೆದಿದೆ.
ದೂರು ನೀಡಿದ ಎರಡು ದಿನಗಳ ನಂತರ ಕಳ್ಳರು ಕದ್ದ ಚಿನ್ನಾಭರಣವನ್ನು ಮನೆಯ ಮುಂಭಾಗದ ಜಗಲಿ ಮೇಲೆ ಇಟ್ಟುಹೋಗಿದ್ದಾರೆ ಎನ್ನಲಾಗಿದೆ.
ರಾಗಿಮುದ್ದನಹಳ್ಳಿ ಗ್ರಾಮದ ಸಿದ್ದೇಗೌಡ ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು. ಮನೆ ದೇವರ ಪೂಜೆಗೆ ಹೋಗಿದ್ದ ವೇಳೆ ಕಳ್ಳತನ ನಡೆದಿತ್ತು ಎನ್ನಲಾಗಿದೆ.
ಮನೆಯ ಹೆಂಚುಗಳನ್ನ ತೆಗೆದು ಒಳನುಗ್ಗಿದ್ದ ಕಳ್ಳರು, ಬೀರುವನ್ನ ಹೊಡೆದು ಕಳ್ಳತನ ಮಾಡಿದ್ದರು. 50 ಗ್ರಾಂ ಚಿನ್ನದ ಸರ, 10 ಗ್ರಾಂ ಚೈನ್, 15 ಗ್ರಾಂ ಮೂರು ಜೊತೆಓಲೆಗಳನ್ನು ಕದಿದ್ದರು. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಗೆ ಸಿದ್ದೇಗೌಡ ದೂರು ನೀಡಿದ್ದರು. ಈ ಬೆನ್ನಲ್ಲೇ ಕಳ್ಳತನವಾಗಿದ್ದ ಚಿನ್ನಾಭರಣ 2 ದಿನಗಳ ಬಳಿಕ ಪವಾಡವೆಂಬಂತೆ ಮತ್ತೆ ದೊರಕಿದೆ.
Click