ನವದೆಹಲಿ: ಭಾರತದ ಸ್ವಪ್ನಿಲ್ ಕುಶಾಲೆ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಅಜರ್ ಬೈಜಾನ್ ನ ಬಾಕುನಲ್ಲಿ ನಡೆಯುತ್ತಿರುವ ಟೂರ್ನಿಯ 50 ಮೀ. ರೈಫಲ್ ತ್ರಿ ಪೋಸಿಷನ್ಸ್ ನಲ್ಲಿ ಗುರುವಾರ ಅವರಿಗೆ ಪದಕ ಒಲಿದಿದೆ.
26 ವರ್ಷದ ಸ್ವಪ್ನಿಲ್ , ಫೈನಲ್ ನಲ್ಲಿ 10–16ರಿಂದ ಉಕ್ರೇನ್ ನ ಸೆರಿಯ್ ಕುಲಿಶ್ ಅವರಿಗೆ ಸೋತರು. 2016ರ ರಿಯೊ ಒಲಿಂಪಿಕ್ಸ್ ನಲ್ಲಿ ಕುಲಿಶ್ ಬೆಳ್ಳಿ ಪದಕ ವಿಜೇತರಾಗಿದ್ದರು. ಶ್ರೇಯಾಂಕ ಸುತ್ತಿನಲ್ಲಿ ಕುಲಿಶ್ 411 ಪಾಯಿಂಟ್ಸ್ ಗಳಿಸಿದರೆ, ಸ್ವಪ್ನಿಲ್ 409.1 ಪಾಯಿಂಟ್ಸ್ ಕಲೆಹಾಕಿದ್ದರು. ಕಂಚು ಜಯಿಸಿದ ಫಿನ್ ಲೆಂಡ್ ನ ಅಲೆಕ್ಸಿ 407.8 ಪಾಯಿಂಟ್ಸ್ ಸಂಗ್ರಹಿಸಿದ್ದರು.