ನ್ಯೂಸ್ ನಾಟೌಟ್ :ಡಾ.ಕುರುಂಜಿ ವೆಂಕಟ್ರಮಣ ಗೌಡರ 96ನೇ ಜಯಂತೋತ್ಸವದ ಸವಿನೆನಪಿಗಾಗಿ ಉಚಿತ ಬೃಹತ್ ವೈದ್ಯಕೀಯ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ನ.24ರಂದು ಶ್ರೀ ಹರಿಹರೇಶ್ವರ ಕಲಾ ಮಂದಿರದಲ್ಲಿ ನಡೆಸಲಾಯಿತು.
ಕೆ ವಿ ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ, ಕೆ ವಿ ಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಜಿಲ್ಲಾ ಅಂಧತ್ವ ನಿಯಂತ್ರಣ ಸೊಸೈಟಿ ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲಮೊಗ್ರು ಮತ್ತು ಸುಬ್ರಹ್ಮಣ್ಯ ಇವರ ಸಹಭಾಗಿತ್ವದೊಂದಿಗೆ ಶ್ರೀ ಹರಿಹರೇಶ್ವರ ದೇವಸ್ಥಾನ ಹರಿಹರ ಪಲ್ಲತ್ತಡ್ಕ ಹಾಗು ವಿವಿದ ಸಂಘ ಸಂಸ್ಥೆಗಳ ಸಹಕಾರದಲ್ಲಿ ಕಾರ್ಯಕ್ರಮ ನಡೆಸಲಾಯಿತು.
ಅಧ್ಯಕ್ಷತೆಯನ್ನು ಕೆವಿಜಿ ಸುಳ್ಯ ಹಬ್ಬ ಸೇವಾ ಸಂಘದ ಅಧ್ಯಕ್ಷ ಎನ್ ಎ ಜ್ಞಾನೇಶ್ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಅಕಾಡಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ.ಕೆ ವಿ ಚಿದಾನಂದರವರು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕಿಶೋರ್ ಕೂಜುಗೋಡು, ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ ಕುಮಾರ್ ಅಂಜನ, ಶ್ರೀ ಕ್ಷೇತ್ರದ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ, ವಲಯ ಮೆಲ್ವಿಚಾರಕ ಕೃಷ್ಣಪ್ಪ, ಕೊಲ್ಲಮೊಗ್ರ ಹರಿಹರ ಪ್ರಾ.ಕೃ ಪ ಸ ಸಂಘದ ಅಧ್ಯಕ್ಷರಾದ ಹರ್ಷಕುಮಾರ್ ದೇವಜನ, ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಕುಲ್ದೀಪ್, ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಸಂಚಾಲಕರಾದ ಪುರುಷೋತ್ತಮ ಕೆ ಜಿ, ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್, ಕೋಶಾದಿಕಾರಿ ಶ್ರೀ ಕೃಷ್ಣ ಎಂ ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿರಿಯ ವೈದ್ಯರಾದ ಚಂದ್ರಶೇಖರ ಕಿರಿಭಾಗ ಹಾಗು ಹಿರಿಯ ನಾಗರಿಕರಾದ ಲಿಂಗಪ್ಪ ಗೌಡ ಮುಂಡಾಜೆ, ಪದ್ಮಯ್ಯ ಗೌಡ ಕೂಜುಗೊಡು ಕಟ್ಟಮನೆಯವರನ್ನು ಸನ್ಮಾನಿಸಲಾಯಿತು.
ಶರಣ್ಯ,ಲಿಖಿತ ಪ್ರಾರ್ಥಿಸಿ, ಡಾ ಪುರುಷೋತ್ತಮ ಕೆ ವಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ| ಸೋಮಶೇಖರ್ ಕಟ್ಟೆಮನೆ ದನ್ಯವಾದ ಮಾಡಿ, ಅಜಯ್ ಪೊಯ್ಯಮಜಲು ಕಾರ್ಯಕ್ರಮ ನಿರೂಪಿಸಿದರು. ನೂರಾರು ಜನ ಈ ವೈದ್ಯಕೀಯ ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ.