ನ್ಯೂಸ್ ನಾಟೌಟ್: ಓಲಾ ಸ್ಕೂಟರ್ ಬಿಡುಗಡೆಯಾಗಿ ಸುಮಾರು 4 ತಿಂಗಳುಗಳೇ ಕಳೆದಿವೆ. ಕೆಲವರು ಓಲಾ ಸ್ಕೂಟರ್ ಕಾರ್ಯಕ್ಷಮತೆಯನ್ನು ಹೊಗಳಿದರೆ ಮತ್ತೆ ಕೆಲವರು ಓಲಾ ಸ್ಕೂಟರ್ನ ಬ್ಯಾಟೆರಿ ಹಾಗೂ ಕಳಪೆ ಕಸ್ಟಮರ್ ಸೇವೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಓಲಾ ಇಲೆಕ್ಟ್ರಿಕ್ ಸ್ಕೂಟರ್ ಕಸ್ಟಮರ್ ಒಬ್ಬರು ಸ್ಕೂಟರ್ನ ಕಾರ್ಯಕ್ಷಮತೆಯ ವೈಫಲ್ಯದಿಂದ ಮನನೊಂದು ಒಲಾ ಇಲೆಕ್ಟ್ರಿಕ್ ಸ್ಕೂಟರ್ನ ಶೋ ರೂಮ್ ಮುಂದೆಯೇ ಸುತ್ತಿಗೆಯಿಂದ ಹೊಡೆದು ಓಲಾ ಇಲೆಕ್ಟ್ರಿಕ್ ಸ್ಕೂಟ ರ್ನ್ನು ನಜ್ಜುಗುಜ್ಜು ಮಾಡಿ ಹಾನಿ ಮಾಡಿದ ಘಟನೆ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವಕ ಹಾಗೂ ಆತನ ಮೂವರು ಸ್ನೇಹಿತರು ಸೇರಿಕೊಂಡು ಹ್ಯಾಮರ್ (ಸುತ್ತಿಗೆ)ನಿಂದ ಹೊಡೆದು ಓಲಾ ಸ್ಕೂಟರ್ ನ್ನು ಹುಡಿ ಹುಡಿ ಮಾಡಿದ್ದಾರೆ. ರಿಪೇರಿಗೆ ಬಂದ ಓಲಾ ಇಲೆಕ್ಟ್ರಿಕ್ ಸ್ಕೂಟರನ್ನು ರಿಪೇರಿ ಮಾಡಿದ ಶೋ ರೂಮ್ ಅದಕ್ಕೆ 90 ಸಾವಿರ ರೂಪಾಯಿ ಬಿಲ್ ಮಾಡಿದೆ. 90 ಸಾವಿರ ರೂಪಾಯಿಗೆ ಇನ್ನು ಕೆಲ ಸಾವಿರ ಸೇರಿಸಿದರೆ ಹೊಸ ಓಲಾ ಇಲೆಕ್ಟ್ರಿಕ್ ಸ್ಕೂಟರನ್ನೇ ಕೊಳ್ಳಬಹುದು, ಹೀಗಿರುವಾಗ ರಿಪೇರಿಗೆಯೇ ಓಲಾ ಶೋರೂಮ್ ಇಷ್ಟೊಂದು ದುಬಾರಿ ಶುಲ್ಕ ವಿಧಿಸಿದ್ದನ್ನು ನೋಡಿ ಸಿಟ್ಟಿಗೆದ್ದ ಓಲಾ ಸ್ಕೂಟರ್ನ ಗ್ರಾಹಕ ಓಲಾ ಇಲೆಕ್ಟ್ರಿಕ್ ಶೋ ರೂಮ್ ಮುಂದೆಯೇ ಓಲಾ ಸ್ಕೂಟರನ್ನು ಅಡ್ಡ ಮಲಗಿಸಿ ಅದನ್ನು ಹ್ಯಾಮರ್ನಿಂದ ಬಡಿದು ಹುಡಿ ಹುಡಿ ಮಾಡಿದ್ದಾರೆ.