ನ್ಯೂಸ್ ನಾಟೌಟ್:ಬಿರಿಯಾನಿ ಎಲ್ಲರ ಮೆಚ್ಚಿನ ಖಾದ್ಯಗಳಲ್ಲಿ ಒಂದು. ಸಾಮಾನ್ಯವಾಗಿ ಚಿಕನ್ ಬಿರಿಯಾನಿ, ಹೈದರಾಬಾದ್ ಮಟನ್ ಬಿರಿಯಾನಿ, ವೆಜ್ ಬಿರಿಯಾನಿ, ಮಶ್ರೂಮ್ ಬಿರಿಯಾನಿ, ಪ್ರಾನ್ ಬಿರಿಯಾನಿ ಗೊತ್ತೇ ಇದೆ.. ಆದರೆ ಪಾರ್ಲೆ-ಜಿ ಬಳಸಿ ಬಿರಿಯಾನಿ ಮಾಡುವ ಬಗ್ಗೆ ಒಬ್ಬಳು ಮಹಿಳೆ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ವೀಡಿಯೊದಲ್ಲಿ ದೊಡ್ಡ ಪಾತ್ರೆಯಲ್ಲಿ ಅನ್ನದ ಜೊತೆಗೆ ಪಾರ್ಲೆ ಜಿ ಬಿಸ್ಕತ್ತು ಇರುವುದನ್ನು ಕಾಣಬಹುದು. ಒಳ್ಳೆಯ ಮಸಾಲೆ ಹಾಕಿ ಈ ಬಿರಿಯಾನಿ ಮಾಡಿದ್ದೇನೆ ಎಂದು ಮಹಿಳೆ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಸದ್ಯ ವಿಡಿಯೋ ಹಂಚಿಕೊಂಡ ಕೇವಲ 3 ದಿನಗಳಲ್ಲಿ 1ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿರುವ ಮಹಿಳೆಯ ಹೆಸರು ಹೀನಾ ಕೌಸರ್ ಎಂದು ತಿಳಿದುಬಂದಿದೆ. ಆನಾರೋಗ್ಯಕರ ಆಹಾರದ ಬಗ್ಗೆ ಮಾಹಿತಿ ಹರಡುವ ಬಗ್ಗೆ ಈ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Click