ನ್ಯೂಸ್ ನಾಟೌಟ್: ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಶ್ರೀ ಶಿವದತ್ತ ಪ್ರತ್ಯಂಗಿರಿ ಆಶ್ರಮದಲ್ಲಿ ವಿಶಿಷ್ಟವಾದ ಮೆಣಸಿನಕಾಯಿ ಅಭಿಷೇಕ ನಡೆಯುತ್ತಿದ್ದು, ಭಕ್ತರು ಸ್ವಾಮೀಜಿಗೆ ಮೆಣಸಿನ ಹುಡಿಯಲ್ಲಿ ಅಭಿಷೇಕ ಮಾಡುತ್ತಾರೆ.
ಪ್ರತೀ ವರ್ಷ ಈ ಅಭಿಷೇಕದಲ್ಲಿ ಸಾಕಷ್ಟು ಜನರು ಪಾಲ್ಗೊಳ್ಳುತ್ತಾರೆ.ಶ್ರೀ ಶಿವದತ್ತ ಸ್ವಾಮೀಜಿಯ ಮೇಲೆ ಸುಮಾರು 100 ಕೆಜಿ ಮೆಣಸಿನಕಾಯಿಯಿಂದ ಅಭಿಷೇಕ ಮಾಡಲಾಗುತ್ತದೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಮೆಣಸಿನಕಾಯಿಯಿಂದ ಅಭಿಷೇಕ ನಡೆಸುವುದು ವಾಡಿಕೆಯಾಗಿದ್ದು, ಕಳೆದ 14 ವರ್ಷಗಳಿಂದ ಮೆಣಸಿನಕಾಯಿಯಿಂದ ಅಭಿಷೇಕ ನಡೆಸಿಕೊಂಡು ಬರಲಾಗುತ್ತಿದೆ ಎನ್ನಲಾಗಿದೆ.
ಅಂತಹ ಕೆಂಪು ಮೆಣಸಿನಕಾಯಿಯನ್ನು ಹುರಿದು ಪ್ರತ್ಯಂಗಿರಿ ಶಿವನಿಗೆ ಅಭಿಷೇಕ ಮಾಡಿದರೆ ಅವರ ಕಷ್ಟಗಳು ಮತ್ತು ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗುತ್ತದೆ. ಆಂಧ್ರಪ್ರದೇಶದ ಏಲೂರು ಜಿಲ್ಲೆಯಲ್ಲಿ ನಡೆದ ಮೆಣಸಿನ ಪುಡಿಯ ಅಭಿಷೇಕ ಈಗ ಎಲ್ಲೆಡೆ ವೈರಲ್ ಆಗಿದೆ.
Click