ನ್ಯೂಸ್ ನಾಟೌಟ್: ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಕಾಳಗ ಮತ್ತಷ್ಟು ತಾರಕ್ಕೇರಿದ್ದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಮನೆ ಮೇಲೆ ಹಿಜ್ಬುಲ್ಲಾ ಮತ್ತೊಮ್ಮೆ ದಾಳಿ ನಡೆಸಿದ್ದು, ಕೈಸ್ರಾದಲ್ಲಿರುವ ನೆತನ್ಯಾಹು ನಿವಾಸದ ಬಳಿ ಎರಡು ರಾಕೆಟ್ಗಳು ಬಿದ್ದಿದ್ದು, ದಾಳಿ ಸಮಯದಲ್ಲಿ ನೆತನ್ಯಾಹು ಮತ್ತು ಅವರ ಕುಟುಂಬವು ನಿವಾಸದಲ್ಲಿ ಇರಲಿಲ್ಲ. ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಎಲ್ಲ ಮಿತಿಗಳನ್ನು ಮೀರಿದ ಕೃತ್ಯವಿದು. ಇದನ್ನು ಸಹಿಸಲಾಗದು ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಪ್ರಧಾನಿ ನೆತನ್ಯಾಹು ಅವರ ಹತ್ಯೆಗೆ ಯತ್ನಿಸುತ್ತಿರುವ ಇರಾನ್ ಹಾಗೂ ಅದರ ಬೆಂಬಲಿತ ಪಡೆಗಳು ಈ ಕೃತ್ಯವೆಸಗಿರಬಹುದು’ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ಕಳೆದ ತಿಂಗಳು ಅಕ್ಟೋಬರ್ 19 ರಂದು ನೆತನ್ಯಾಹು ಅವರ ಮನೆಯ ಮೇಲೆ ಮೊದಲ ಬಾರಿಗೆ ದಾಳಿ ನಡೆಸಲಾಗಿತ್ತು, ಹಿಜ್ಬುಲ್ಲಾ ನಡೆಸಿದ ಈ ವಿಫಲ ದಾಳಿ ವಿರುದ್ಧ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ತಕ್ಕ ಉತ್ತರ ಕೊಟ್ಟೇ ಕೊಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು, ಈಗ ಮತ್ತೆ ದಾಳಿ ಮಾಡಲಾಗಿದೆ.
Click