ನ್ಯೂಸ್ ನಾಟೌಟ್: ಕೊಕ್ಕಡದ ಮುಸ್ಲಿಂ ಸಮುದಾಯದ ಆಟೋ ಚಾಲಕನೋರ್ವ ಬೆಂಗಳೂರಿನ ಯುವತಿಯೋರ್ವಳನ್ನು ರಿಜಿಸ್ಟರ್ ಮದುವೆಯಾಗಿರುವುದಾಗಿ ಅವರ ಪೋಟೋ ಸಹಿತ ಮದುವೆ ದೃಢಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರಿನ ಯುವತಿಯ ಜೊತೆ ಆಟೋ ಚಾಲಕ ಸಮೀರ್ ಎಂಬಾತನ ಪರಿಚಯವಾಗಿ ನಂತರ ಅವರಿಬ್ಬರು ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ರಿಜಿಸ್ಟರ್ ಮದುವೆಯಾಗಿರುವುದಾಗಿ ಅವರಿಬ್ಬರ ಪೋಟೋ ಸಹಿತ ಮದುವೆ ದೃಢಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅನ್ಯಕೋಮಿನ ಯುವಕ ಹಿಂದೂ ಯುವತಿಯ ಜೊತೆ ಆಕೆಯನ್ನು ವಿವಾಹವಾಗಿರುವ ವಿಷಯ ಕೊಕ್ಕಡದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಚರ್ಚೆಗೆ ಕಾರಣವಾಗಿದೆ. ಈ ಘಟನೆಯ ಸತ್ಯಾಸತ್ಯತೆ ಇನ್ನಷ್ಟೇ ತಿಳಿದು ಬರಬೇಕಾಗಿದೆ.