ನ್ಯೂಸ್ ನಾಟೌಟ್: ರಸ್ತೆಗಳಲ್ಲಿ ಸುತ್ತಾಡುತ್ತಿದ್ದ ಬಿಡಾಡಿ ಆಡುಗಳನ್ನು ಸುಳ್ಯ ನಗರ ಪಂಚಾಯತ್ ವಶಕ್ಕೆ ಪಡೆದು ಪಂಚಾಯತ್ ಆವರಣದಲ್ಲಿ ಕಟ್ಟಿ ಹಾಕಿಸಿದೆ.
ಆಡುಗಳು ನಗರದಲ್ಲಿ ಎಲ್ಲೆಂದರಲ್ಲಿ ಸುತ್ತಾಡಿ ಸಮಸ್ಯೆ ಸೃಷ್ಠಿಸುತ್ತವೆ, ವಾಹನಗಳಿಗೆ ಅಡ್ಡ ಬರುತ್ತಿದೆ ಎಂದು ಸಾರ್ವಜನಿಕರಿಂದ ಆಗಾಗ ದೂರುಗಳು ಕೇಳಿಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಆಡುಗಳ ಹಿಂಡನ್ನು ನಗರ ಪಂಚಾಯತ್ ಸಿಬ್ಬಂದಿ ವಶಕ್ಕೆ ಪಡೆದು ನಗರ ಪಂಚಾಯತ್ ಆವರಣದಲ್ಲಿ ಕಟ್ಟಿ ಹಾಕಿದ್ದಾರೆ.
ವಾರಿಸುದಾರರು ದಂಡ ಕಟ್ಟಿ ಬಿಡಿಸಿಕೊಳ್ಳಬಹುದು ಎಂದು ನಗರ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ. ಆಡುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಡಬಾರದು ಎಂದು ನಗರ ಪಂಚಾಯತ್ ಈ ಹಿಂದೆಯೇ ಪ್ರಕಟಣೆ ನೀಡಿತ್ತು ಎನ್ನಲಾಗಿದೆ.
Click