ನ್ಯೂಸ್ ನಾಟೌಟ್: ಇತ್ತೀಚೆಗೆ ಕೊಡಗು-ಸಂಪಾಜೆ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಕಾಡು ಕುರಿ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಡಿಕೇರಿ ಪ್ರಕರಣ 2ನೇ ಆರೋಪಿ ಜತಿನ್ ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ.
ನ್ಯಾಯಾದೀಶರಾದ ಪ್ರಶಾಂತ್ ಜಿ ವಿಚಾರಣೆ ಕೈಗೆತ್ತಿಕೊಂಡು ನಿರೀಕ್ಷಣಾ ಜಾಮೀನು ನೀಡಿದರು. ಈ ಹಿಂದೆ ಒಂದನೇ ಆರೋಪಿ ಗಂಗಾಧರ್ ಅವರನ್ನ ವಲಯ ಅರಣ್ಯಾಧಿಕಾರಿಗಳು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದರು. ಅವರಿಗೆ ಅಲ್ಲಿ ಬೇಲ್ ದೊರಕಿತ್ತು. ಆರೋಪಿ ಪರ ವಕೀಲ ಕಪಿಲ್ ಕುಮಾರ್ ದುಗ್ಗಳ ವಾದ ಮಂಡಿಸಿದ್ದರು.