ನ್ಯೂಸ್ ನಾಟೌಟ್: ಮಧ್ಯಪ್ರದೇಶದ ಭೋಪಾಲ್ ನ ಮಾಜಿ ಬಿಜೆಪಿ ಸಂಸದೆ, ಹಿಂದುತ್ವ ಪ್ರಚಾರಕಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಗೆ ಮುಂಬೈನ ವಿಶೇಷ ಎನ್.ಐ.ಎ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ.
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ವಿಚಾರಣೆಯಲ್ಲಿ ಭಾಗವಹಿಸದ ಕಾರಣ ಮುಂಬೈನ ವಿಶೇಷ ಎನ್.ಐ.ಎ ನ್ಯಾಯಾಲಯ ಮಾಜಿ ಬಿಜೆಪಿ ಸಂಸದೆ, ಹಿಂದುತ್ವ ಪ್ರಚಾರಕಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಗೆ ಬಂಧನ ವಾರಂಟ್ ಹೊರಡಿಸಿದ್ದು, ಈ ಮಧ್ಯೆ ಹಿಂದುತ್ವ ಪ್ರಚಾರಕಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗಿದೆ.
“ಕಾಂಗ್ರೆಸ್ ನ ಚಿತ್ರಹಿಂಸೆ ಎಟಿಎಸ್ ಕಸ್ಟಡಿಗೆ ವಿಸ್ತರಿಸಿದ್ದು ಮಾತ್ರವಲ್ಲದೆ ನನ್ನ ಜೀವನದುದ್ದಕ್ಕೂ ಮರಣದಂಡನೆ ಶಿಕ್ಷೆಗೆ ಕಾರಣವಾಯಿತು. ಅಲ್ಲದೇ, ಮೆದುಳಿನಲ್ಲಿ ಊತ, ದೃಷ್ಟಿ ಕುಂಠಿತ, ಶ್ರವಣದೋಷ, ಮಾತಿನಲ್ಲಿ ಅಸಮತೋಲನ, ಸ್ಟೀರಾಯ್ಡ್ ಮತ್ತು ನ್ಯೂರೋ ಡ್ರಗ್ಸ್ ನಿಂದಾಗಿ ಇಡೀ ದೇಹದಲ್ಲಿ ಊತ ಕಾಣಿಸಿಕೊಂಡಿದೆ. ಇದಕ್ಕಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ನಾನು ಜೀವಂತವಾಗಿದ್ದರೆ, ಖಂಡಿತವಾಗಿಯೂ ನ್ಯಾಯಾಲಯಕ್ಕೆ ಹೋಗುತ್ತೇನೆ” ಎಂದು ಬರೆದುಕೊಂಡಿದ್ದಾರೆ.
Click