ನ್ಯೂಸ್ ನಾಟೌಟ್: ಈ ನಾಣ್ಯವನ್ನು ತಯಾರಿಸಲು ಸಾವಿರ ರೂಪಾಯಿಗಳ ಒಳಗೆ ಖರ್ಚಾಗಿರಬಹುದು. ಆದರೆ ಅದನ್ನು ಹರಾಜು ಮಾಡಿದಾಗ, ಬಿಡ್ ನಲ್ಲಿ 4 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಈ ಘಟನೆ ಅಮೇರಿಕದಲ್ಲಿ ನಡೆದಿದೆ.
ಈ ನಾಣ್ಯವನ್ನು 1975 ರಲ್ಲಿ ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಇದು 20ನೇ ಶತಮಾನದ ಅಪರೂಪದ ನಾಣ್ಯಗಳಲ್ಲೊಂದು ಎಂದು ವರದಿಗಳಲ್ಲಿ ಹೇಳಲಾಗಿದೆ. ಈ ನಾಣ್ಯವು ‘ಅಮೇರಿಕನ್ ಡೈಮ್’ ಆಗಿದೆ ಎಂದು ಹರಾಜು ಏಜೆನ್ಸಿ ಹೇಳಿದೆ. ಇದನ್ನು 1975 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಮಿಂಟ್ ತಯಾರಿಸಿದೆ. ಸದ್ಯ ಅಮೆರಿಕದ ಗ್ರೇಟ್ ಕಲೆಕ್ಷನ್ ಹೆಸರಿನ ಸಂಸ್ಥೆಯೊಂದು ನಡೆಸಿದ ಹರಾಜಿನಲ್ಲಿ ಈ ನಾಣ್ಯ 4.25 ಕೋಟಿಗೆ ಹರಾಜಾಗಿದೆ ಎಂದು ಹೇಳಲಾಗಿದೆ.
ಇನ್ನು ಈ ನಾಣ್ಯವನ್ನು ನೋಡುವಾಗಲೇ ಒಂದು ಫೋಟೋ ಕಾಣಿಸುತ್ತದೆ. ಇದು ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಅವರ ಚಿತ್ರವನ್ನು ಹೊಂದಿದೆ. ಇದರ ಹೊರತಾಗಿ ಪ್ರತಿ ನಾಣ್ಯದ ಮೇಲೆ ಮಾಡಲಾಗುವ ಡಾಲರ್ ಚಿಹ್ನೆಯನ್ನು ಈ ನಾಣ್ಯದಲ್ಲಿ ಮುದ್ರಿಸಲಾಗಿಲ್ಲ. ಇಡೀ ಪ್ರಪಂಚದಲ್ಲಿ ಈ ರೀತಿಯ ಎರಡು ನಾಣ್ಯಗಳು ಮಾತ್ರ ಇವೆ, ಅದಕ್ಕಾಗಿಯೇ ಈ ನಾಣ್ಯ ತುಂಬಾ ವಿಶೇಷವಾಗಿದೆ ಎಂದು ಹೇಳಲಾಗಿದೆ.
ಗ್ರೇಟ್ ಕಲೆಕ್ಷನ್ ಹೆಸರಿನ ಹರಾಜು ಸಂಸ್ಥೆಯು ಈ ವಿಶೇಷ ನಾಣ್ಯದ ಹರಾಜನ್ನು ಆನ್ ಲೈನ್ ನಲ್ಲಿ ನಡೆಸಿತು.
Click