ನ್ಯೂಸ್ ನಾಟೌಟ್: ಚೀಲದಲ್ಲಿ ಹಣ ಶೇಖರಣೆ ಮಾಡಿ ಶಾಸಕ ಹರೀಶ್ ಪೂಂಜರವರು ಹಂಚುತ್ತಿದ್ದಾರೆ ಎಂಬ ಗಂಭೀರ ಆರೋಪ ಈಗ ಬೆಳ್ತಂಗಡಿಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. 40% ಕಮಿಷನ್ ದಂಧೆ ವಿರುದ್ಧ ಶೇಖರ್ ಲಾಯಿಲ ನೇತೃತ್ವದಲ್ಲಿ ವಿಭಿನ್ನ ಚೀಲ ಚಳವಳಿ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಮಾತನಾಡಿದ ಶೇಖರ್ ಲಾಯಿಲ, ಶಾಸಕರ ವಿರುದ್ಧ ಚೀಲ ಚಳುವಳಿ ಮಾಡಲು ನಿರ್ಧರಿಸಲಾಗಿದೆ. ನಗರದಾದ್ಯಂತ ಚೀಲಗಳನ್ನು ಅಳವಡಿಸಲಾಗಿತ್ತು. ಆದರೆ ಈ ಹೋರಾಟವನ್ನು ಹತ್ತಿಕ್ಕಲು ಶಾಸಕ ಹರೀಶ್ ಪೂಂಜರ ಸೂಚನೆಯಂತೆ ಬಿಜೆಪಿ ಆಡಳಿತದ ಪಟ್ಟಣ ಪಂಚಾಯತ್ ಚೀಲಗಳನ್ನು ತೆರವು ಮಾಡಿದೆ. ಶಾಸಕರು ಹತಾಶೆಗೊಂಡು ಹೋರಾಟವನ್ನು ಹತ್ತಿಕ್ಕುತ್ತಿರುವುದು ಹೋರಾಟವನ್ನು ಎದುರಿಸಲು ತಾಕತ್ತಿಲ್ಲದೆ ಚಡಪಡಿಸುತ್ತಿದ್ದಾರೆ. ನಾವು ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇನ್ನಷ್ಟು ಸ್ಪೂರ್ತಿಯಿಂದ ತಾಲೂಕಿನಾದ್ಯಂತ ಚೀಲ ಚಳುವಳಿಯನ್ನು ತೀವ್ರಗೊ ಳಿಸುತ್ತೇವೆ. ಮುಂದಿನ ದಿನಗಳಲ್ಲಿ ವಿಭಿನ್ನ ರೀತಿಯ ಉಗ್ರ ಸ್ವರೂಪದ ಹೋರಾಟ ನಡೆಸಲಿದ್ದೇವೆ. ಶಾಸಕರಿಗೆ ತಾಕತ್ತಿದ್ದರೆ ತಡೆಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.