ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ದೇವರ ಪೂಜೆಗೆ ಬಂದ ಹುಡುಗಿಯರಿಗೂ ಕಾಮುಕರ ಕಾಟ ತಪ್ಪಿಲ್ಲ. ಇಲ್ಲೊಬ್ಬ ಅಜ್ಜ ವಿದ್ಯಾರ್ಥಿನಿಯೊಬ್ಬಳ ಎದೆಯ ಭಾಗಕ್ಕೆ ಕೈ ಹಾಕಲೆತ್ನಿಸಿ ಈಗ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಜಡಿಸಿಕೊಂಡಿದ್ದಾನೆ.
ಸ್ಥಳೀಯ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನ.2ರಂದು ರಾತ್ರಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆಗೆ ಕುಟುಂಬ ಸಹಿತ ಬಂದಿದ್ದಾರೆ. ಊಟಕ್ಕೆಂದು ಗೋಡೆ ಬದಿಯಲ್ಲಿ ನಿಂತು ಕಾಯುತ್ತಿದ್ದಾಗ ಅಲ್ಲೆ ಪಕ್ಕದಲ್ಲೇ ಇದ್ದ ಅಜ್ಜನೊಬ್ಬ ಆಕೆಯ ಎದೆಯ ಭಾಗಕ್ಕೆ ಕೈ ಹಾಕಿದ್ದಾನೆ ಎಂದು ಯುವತಿ ಮನೆಯವರಿಗೆ ತಿಳಿಸಿದ್ದಾಳೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಇದೇ ವೇಳೆ ಅವಾಚ್ಯ ಶಬ್ಧಗಳಿಂದ ಅಜ್ಜ ಯುವತಿಯನ್ನು ನಿಂದಿಸಿದ್ದಾನೆ ಎಂದು ತಿಳಿದು ಬಂದಿದೆ. ಯುವತಿ ಕಡೆಯವರು ಪೊಲೀಸರು ದೂರು ನೀಡಿದ್ದಾರೆ. ಸುಬ್ರಹ್ಮಣ್ಯ ಪೊಲೀಸರು BNS ACT -75,352 ಕಾಲಂ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ.