ನ್ಯೂಸ್ ನಾಟೌಟ್: ದೈಹಿಕ ವ್ಯಾಯಾಮದ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಇಲ್ಲೊಬ್ಬ ವೃದ್ದ ಸಾವಿರಾರು ಕಿ.ಮೀ. ದಾರಿಯನ್ನು ನಡೆದುಕೊಂಡು ಹೋಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಕೈಯಲ್ಲೊಂದು ಚೀಲ, ಅದರೊಳಗೊಂದು ಕೋಲು. ತಿಂಡಿ ಪೊಟ್ಟಣ, ನೀರು. ಎರಡೂ ತೋಳುಗಳಲ್ಲಿ ಜೋಳಿಗೆ. ಅದರಲ್ಲಿ ಕಂಬಳಿ, ನೆಲಹಾಸು, ಹೊದಿಕೆ, ದಿಂಬು. ಕೈಯಲ್ಲಿ ದೊಡ್ಡ ತ್ರಿವರ್ಣ ಧ್ವಜ, ಇವುಗಳೆಲ್ಲದರ ಜೊತೆಗೆ 67 ವರ್ಷ ವಯಸ್ಸಿನ ಅಭಿರಾಮ್ ಪ್ರಯಾಣ ಮಾಡುತ್ತಾ ಇದೀಗ ತುಳುನಾಡಿಗೆ ಬಂದು ತಲುಪಿದ್ದಾರೆ. ಒಡಿಶಾದಿಂದ ಹೊರಟಿರುವ ಅವರು ಇನ್ನೂ 3 ಸಾವಿರ ಕಿಲೊಮೀಟರ್ ಸಾಗಿದರೆ ಒಡಿಶಾದಲ್ಲೇ ಪಯಣ ಮುಕ್ತಾಯಗೊಳ್ಳಲಿದೆ.
ಒಡಿಶಾದ ದರ್ಲಗ ಗ್ರಾಮದಿಂದ ಕಳೆದ ವರ್ಷ ಮೇ 25ರಂದು ಹೊರಟ ಅಭಿರಾಮ್ ಅವರು ಭೂತಾನ್, ನೇಪಾಳಕ್ಕೆ ಸಾಗಿ ಚೀನಾ ಗಡಿಯ ಸಮೀಪದಿಂದ ಭಾರತಕ್ಕೆ ವಾಪಸಾಗಿ ವಾಘಾ ಗಡಿ, ಜಮ್ಮು ಮತ್ತು ಕಾಶ್ಮೀರ ಸುತ್ತಾಡಿ ಮಧ್ಯ ಭಾರತ, ದಕ್ಷಿಣದತ್ತ ಬಂದಿದ್ದಾರೆ. ಅಕ್ಟೋಬರ್ 10ರಂದು ಗೋವಾದಿಂದ ಕರ್ನಾಟಕಕ್ಕೆ ಬಂದಿರುವ ಅವರು 2025ರ ಮಾರ್ಚ್ನಲ್ಲಿ ಪಯಣಕ್ಕೆ ಅಂತ್ಯ ಹಾಡಲಿದ್ದಾರೆ. ‘ದೇವರು ಕರುಣಿಸಿರುವ ದೇಹವನ್ನು ಚಟಗಳಿಗಾಗಿ ಬಳಸಿಕೊಳ್ಳಬಾರು ಎಂದು ತಿಳಿಸಿದ್ದಾರೆ.