ನ್ಯೂಸ್ ನಾಟೌಟ್:ಯುವತಿಯೊಬ್ಬಳು ಸೆಲ್ಫಿ ಫೋಟೋ ಜತೆಗೆ ರೀಲ್ಸ್ ಮಾಡೋದಕ್ಕಂತ ಹೋಗಿ ಕೆರೆ ಬಳಿ ಹೋಗಿ ಅಚಾನಕ್ ಆಗಿ ಕಾಲು ಜಾರಿ ಬಿದ್ದಿರುವ ಘಟನೆ ಬಗ್ಗೆ ವರದಿಯಾಗಿದೆ.ಆಕೆಯನ್ನು ಬರೋಬ್ಬರಿ ೧೨ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬದುಕಿಸಿದ ರೋಚಕ ವಿಚಾರದ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಮಧ್ಯಾಹ್ನ 2.30 ಸುಮಾರಿಗೆ ತುಮಕೂರು ತಾಲೂಕಿನ ಮಂದಾರಗಿರಿ ಬಳಿಯಿರುವ ಮೈದಾಳ ಕೆರೆ ಬಳಿ ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಶಿವರಾಮ್ ಪುರ ಗ್ರಾಮದ ನಿವಾಸಿ ಹಂಸ ಬದುಕುಳಿದ ಯುವತಿ. ತುಮಕೂರಿನಲ್ಲಿ ಸಿದ್ದಗಂಗಾ ಕಾಲೇಜ್ನಲ್ಲಿ ಬಿ ಟೇಕ್ ಮಾಡುತ್ತಿದ್ದು, ಈಕೆ ತನ್ನ ಹೈಸ್ಕೂಲ್ ಸ್ನೇಹಿತೆ ಕೀರ್ತನಾ ಬಂದಳು ಎಂದು ಹಾಸ್ಟೆಲ್ನಿಂದ ತುಮಕೂರು ತಾಲೂಕಿನ ಮಂದಾರಗಿರಿ ಬಳಿಯಿರುವ ಮೈದಾಳ ಕೆರೆ ಬಳಿ ಹೋಗಿದ್ದಾರೆ. ಇತ್ತಿಚೆಗೆ ಮಳೆ ಬಂದ ಕಾರಣ ಕೆರೆ ಕೋಡಿ ತುಂಬಿ ಹರಿದಿದೆ. ನೋಡಲು ಸುಂದರವಾಗಿರುವ ಕೆರೆ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿರುವ ಕಾರಣ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಸಾಕಷ್ಟು ವೈರಲ್ ಆಗಿತ್ತು.
ಹಂಸ ಕಾಲು ಜಾರಿ ಬಿದ್ದಾಗಲೇ ಜೊತೆಯಲ್ಲಿ ಇದ್ದ ಸ್ನೇಹಿತೆ ಕೀರ್ತನಾ ತನ್ನ ತಂದೆ-ತಾಯಿ ಹಾಗೂ ಹಂಸಳ ತಂದೆ ಸೋಮನಾಥ್ಗೂ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಕೂಡಲೇ ಗಾಬರಿಯಾದ ಹಂಸ ಕುಟುಂಬ ಕಂಗಲಾಗಿ ಓಡಿ ಬಂದಿದ್ದು,ಸ್ಥಳಕ್ಕೆ ಅಗ್ನಿ ಶಾಮಕದಳ ಹಾಗೂ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಹಂಸಾಳ ಹುಟುಕಾಟ ಆರಂಭಿಸಿದ್ದರು.
ಕೆರೆಯಲ್ಲಿ ನೀರಿನ ಹರಿವು ವಿಪರೀತ ಹೆಚ್ಚಳ ಇದ್ದ ಕಾರಣ ಹಂಸಾಳನ್ನ ರಕ್ಷಿಸಲು ನಡೆಸಿದ ಕಾರ್ಯಾಚರಣೆಗೆ ತಡೆಯಾಗಿದೆ. ಇತ್ತ ಈಗಾಗಲೇ ಹಂಸ ಬದುಕುಳಿಯುದಿಲ್ಲ ಅಂತಾ ಕುಟುಂಬ ಕಣ್ಣಿರುಡುತ್ತಾ ಕಾದಿದ್ದರು. ರಾತ್ರಿವರೆಗೂ ಸಿಗದ ಹಂಸಾ ಕತ್ತಲಾದ ಕಾರಣ ಬೆಳಿಗ್ಗೆಯಿಂದ ಮತ್ತೆ ಕಾರ್ಯಾಚರಣೆ ಶುರು ಮಾಡಿದ್ದಾರೆ. ಮೊದಲಿಗೆ ಹಂಸ ಮೃತ ದೇಹವಾದರೂ ಸಿಗಲಿ ಅಂತಾ ಅಗ್ನಿ ಶಾಮಕದಳ ಪೊಲೀಸರು, ಗ್ರಾಮಸ್ಥರ ನಿರಂತರ ಹುಡುಕಾಟ ನಡೆಸಿದ್ದಾರೆ. ಅಲ್ಲದೇ ಹರಿಯುವ ನೀರನ್ನ ಡೈವರ್ಟ್ ಮಾಡಿ ಮರಳಿನ ಮೂಟೆಗಳಿಂದ ಹರಿಯುವ ಪ್ರಮಾಣ ಕಡಿಮೆ ಮಾಡಿದ್ದಾರೆ. ಸತತ 20 ಗಂಟೆಗಳ ಬಳಿಕ ಬೆಳಿಗ್ಗೆ 12 ಗಂಟೆ ಸುಮಾರಿಗೆ ಹಂಸಾ ಜೀವಂತವಾಗಿ ಪತ್ತೆ ಆಗಿದ್ದಾಳೆ.
ಬದುಕಿಳಿದ ಹಂಸ ಮಾತನಾಡುತ್ತಾ, ನಿನ್ನೆ ಸ್ನೇಹಿತೆ ಜೊತೆಗೆ ಬಂದು ಕಾಲು ಜಾರಿ ಬಿದ್ದೆ. ಇನ್ನೂ ರಾತ್ರಿಯಿಡಿ ಮಂಡಿ ಮೇಲೆ ಕಾದುಕುಳಿತಿದ್ದೆ.ಅಪ್ಪ-ಅಮ್ಮ ನೆನೆದು ಧೈರ್ಯವಾಗಿ ಇದ್ದೆ. ಅಲ್ಲದೇ ಯಾರಾದರೂ ಕಾಪಾಡಲು ಬರುತ್ತಾರೆಂಬ ನಂಬಿಕೆ ಇತ್ತು, ಭಯ ಇರಲಿಲ್ಲ ಎಂದು ಬದುಕಿ ಬಂದ ಹಂಸ ಹೇಳಿದ್ದಾರೆ. ಹಂಸ ಬದುಕುಳಿಯಲ್ಲ ಎನ್ನುವಷ್ಟರಲ್ಲಿ ಪವಾಡ ಸದೃಶ ರೀತಿಯಲ್ಲಿ ಬದುಕಿ ಬಂದು ಎಲ್ಲರಿಗೂ ಶಾಕ್ ನೀಡಿದ್ದಾಳೆ. ರಾತ್ರಿ ಮಳೆ ಬಾರದಿರುವುದು ಹಾಗೂ ಅಗ್ನಿ ಶಾಮಕ ದಳ ಪೊಲೀಸರ ಸತತ ಕಾರ್ಯಾಚರಣೆ ಮತ್ತು ದೇವರ ದಯೆಯಿಂದ ಹಂಸ ಬರಲು ಸಾಧ್ಯವಾಗಿದೆ. ರೀಲ್ಸ್ ಸೆಲ್ಫಿ ಅಂತ ಹೇಳಿ ಸಿಕ್ಕ ಸಿಕ್ಕಲ್ಲಿ ವಿಡಿಯೋ ಮಾಡೋರಿಗೆ ಇದು ಎಚ್ಚರಿಕೆಯ ಪಾಠವಾಗಿದೆ