ನ್ಯೂಸ್ ನಾಟೌಟ್: ಆರ್ಥಿಕವಾಗಿ ತೀರ ಹಿಂದುಳಿದ ಬಡ ಕುಟುಂಬದ ವೃದ್ದನ ಶವವನ್ನು ಸುಳ್ಯದ ಪ್ರಗತಿ ಆಂಬ್ಯುಲೆನ್ಸ್ ನಲ್ಲಿ ಕಲ್ಮಕಾರಿನ ಶಕ್ತಿನಗರಕ್ಕೆ ಉಚಿತವಾಗಿ ತೆಗೆದುಕೊಂಡು ಹೋಗಲಾಗಿದೆ.
ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಎಲುಂಬಾ (65 ವರ್ಷ ) ಅನಾರೋಗ್ಯದ ಹಿನ್ನೆಯಲ್ಲಿ ದಾಖಲಾಗಿದ್ದರು, ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಅವರು ಸಾವಿಗೀಡಾದರು. ಆರ್ಥಿಕವಾಗಿ ತೀರ ಹಿಂದುಳಿದವರಾಗಿದ್ದರಿಂದ ಅವರ ಬಳಿ ಹಣವೇ ಇರಲಿಲ್ಲ. ಆಸ್ಪತ್ರೆಗೆ ಬಿಲ್ ಕಟ್ಟುವುದಕ್ಕೂ ಹಣವಿರಲಿಲ್ಲ. ಇಂತಹ ಸಂದರ್ಭದಲ್ಲಿ ವೆಂಕಟ್ ದಂಬೆಕೋಡಿ, ಮಾಧವ ಚಾಂತಾಳ ಆಸ್ಪತ್ರೆಯಲ್ಲಿ ಮಾತನಾಡಿ ಬಿಲ್ ನಲ್ಲಿ ಡಿಸ್ಕೌಂಟ್ ಮಾಡಿಸಿದರು. ಪ್ರಗತಿ ಆಂಬ್ಯುಲೆನ್ಸ್ ಮಾಲೀಕ ಅಚ್ಚು ತಮ್ಮ ಕಾರಿನ ಡ್ರೈವರ್ ಜೀವನ್ ಮೂಲಕ ಶಕ್ತಿ ನಗರಕ್ಕೆ ತಮ್ಮ ಆಂಬ್ಯುಲೆನ್ಸ್ ನಲ್ಲಿ ಉಚಿತವಾಗಿ ಶವ ಸಾಗಿಸಲು ನೆರವಾದರು. ಒಟ್ಟು ಆಂಬ್ಯುಲೆನ್ಸ್ 100 ಕಿ.ಮೀ. ತನಕ ಹೋಗಿ ಬಂದಿದೆ.