ನ್ಯೂಸ್ ನಾಟೌಟ್: ಸಂಪಾಜೆ ವಲಯ ಕಟ್ಟದ ಕಾರ್ಮಿಕರ ಸಂಘಟನೆಯಲ್ಲಿ ಭಿನ್ನಮತದ ಹೊಗೆ ಎದ್ದಿದೆ. ಈ ಹಿನ್ನೆಲೆಯಲ್ಲಿ ಸಂಘಟನೆಯ ಮೊದಲ ವಿಕೆಟ್ ಪತನಗೊಂಡಿದೆ.ಭಿನ್ನಭಿಪ್ರಾಯದಿಂದ ಬೇಸೆತ್ತು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಚಂದ್ರ ವಿಲಾಸ ಗೂನಡ್ಕ ರಾಜೀನಾಮೆ ನೀಡಿದ್ದಾರೆ.
ನಮ್ಮ ಅಭಿಪ್ರಾಯವನ್ನು ಯಾರೂ ಕೇಳುತ್ತಿಲ್ಲ, ಇದರಿಂದ ನೊಂದು ರಾಜೀನಾಮೆ ನೀಡುತ್ತಿರುವುದಾಗಿ ಚಂದ್ರ ವಿಲಾದ್ ಗೂನಡ್ಕ ತಿಳಿಸಿದ್ದಾರೆ. ಕಳೆದ ಹಲವು ಸಮಯಗಳಿಂದ ಎಲ್ಲವನ್ನು ನಾನು ನೋಡಿಕೊಂಡು ಬರುತ್ತಿದ್ದೇನೆ, ನಾವು ಕಾಣಿಸಿಕೊಳ್ಳುವುದಕ್ಕೆ ಮಾತ್ರ ಇದ್ದೇವೆ, ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ನಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅವರು ನ್ಯೂಸ್ ನಾಟೌಟ್ ಜೊತೆಗೆ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.