ನ್ಯೂಸ್ ನಾಟೌಟ್: ಪೆರಾಜೆಯಲ್ಲಿ ಕಾಡು ಪ್ರಾಣಿ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿದ್ದ ವ್ಯಕ್ತಿಗೆ ಜಾಮೀನು ದೊರಕಿದೆ.
ಅಕ್ಟೋಬರ್ 23 ರಂದು ಬುಧವಾರ ರಾತ್ರಿ ಕಾಡು ಪ್ರಾಣಿ ಬೇಟೆಯಾಡಿದ ಮಾಹಿತಿ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ. ಭಾಸ್ಕರ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ದೇಚಮ್ಮ ಸಮ್ಮುಖದಲ್ಲಿ ದಾಳಿ ನಡೆಸಿ ಪೆರಾಜೆಯ ಪೆರುಮುಂಡದ ಗಂಗಾಧರ ನನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಗಂಗಾಧರನಿಗೆ ಅಪರ ಜೆಎಂಎಫ್ ಮಡಿಕೇರಿ ನ್ಯಾಯಲಯದಿಂದ ಜಾಮೀನು ಮಂಜೂರಾಗಿದೆ. ಆರೋಪಿ ಪರ ಯುವ ವಕೀಲ ದುಗ್ಗಳ ಕಪಿಲ್ ಕುಮಾರ್ ವಾದ ಮಂಡಿಸಿದ್ದರು.