ನ್ಯೂಸ್ ನಾಟೌಟ್ : ದಲಿತರ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 98 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ನಿವಾಸಿಗಳಿಗೆ ಜಿಲ್ಲಾ ನ್ಯಾಯಾಲಯ ಶಿಕ್ಷೆ ನೀಡಿ ಆದೇಶ ನೀಡಿದೆ.
2014 ರ ಆಗಸ್ಟ್ 28 ರಂದು ಘಟನೆ ನಡೆದಿತ್ತು. ಮಂಜುನಾಥ್ ಎನ್ನುವವರಿಗೆ ಸಿನಿಮಾ ಥಿಯೇಟರ್ ನಲ್ಲಿ ನಾಲ್ವರು ಯುವಕರು ಹಲ್ಲೆ ಮಾಡಿದ್ದರು. ಥಿಯೇಟರ್ ನಿಂದ ಊರಿಗೆ ತೆರಳಿದ್ದ ಮಂಜುನಾಥ್ ಊರಿವರಿಗೆ ವಿಷಯ ಮುಟ್ಟಿಸಿದ್ದರು. ಮಂಜುನಾಥ್ ಪರವಾಗಿ ಊರ ಜನರು ಹಲ್ಲೆ ನಡೆಸಿದವರ ಮನೆಯೂ ಸೇರಿದಂತೆ ಅನೇಕ ದಲಿತ ಗುಡಿಸಲುಗಳಿಗೆ ಬೆಂಕಿ ಹಚ್ಚಿ ಗಲಾಟೆ ಮಾಡಿದ್ದರು. ಈ ಕುರಿತು ಭೀಮೇಶ್ ನೀಡಿದ ದೂರಿನನ್ವಯ ಶಿಕ್ಷೆ ಪ್ರಕಟಿಸಲಾಗಿದೆ.
101 ಅಪರಾಧಿಗಳ ಪೈಕಿ ಮೂವರಿಗೆ 5 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ತೀರ್ಪು ನೀಡುತ್ತಿದ್ದಂತಯೇ ನ್ಯಾಯಾಲಯದ ಮುಂದೆ ಅಪರಾಧಿಗಳ ಕುಟುಂಬಸ್ಥರು ಕಣ್ಣೀರು ಹಾಕಿ, ನ್ಯಾಯ ಕೊಡಿಸ್ತೀವಿ ಎಂದು ಅಮಾಯಕರಿಗೆ ಕೋರ್ಟ್ ಶಿಕ್ಷೆ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಅಲ್ಲದೇ, ಕೆಲ ಜನ ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ. ಅಮಾಯಕರಾದವರಿಗೆ ಶಿಕ್ಷೆ ಯಾಕೆ ಎಂದು ತೀರ್ಪು ಪ್ರಕಟವಾಗುತ್ತಿದ್ದಂತಯೇ ಅಪರಾಧಿಗಳು ಕಣ್ಣೀರು ಹಾಕಿದ್ದಾರೆ.
ಇನ್ನು, ಕೋರ್ಟ್ ತೀರ್ಪು ಬರುತ್ತಿದ್ದಂತೆ ಮರಕುಂಬಿಯ ದಲಿತರ ಪ್ರಕರಣದ ಅಪರಾಧಿಗಳಲ್ಲಿ ಒಬ್ಬ ಈ ಸುದ್ದಿ ಕೇಳಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. 30 ವರ್ಷದ ರಾಮಣ್ಣ ಬೋವಿ ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.
Click