ನ್ಯೂಸ್ ನಾಟೌಟ್ : ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್ ನಿಂದ 11 ಕಿಲೋಮೀಟರ್ ದೂರದ ಬೋಟಪತ್ರಿ ಎಂಬಲ್ಲಿ ವಾಸ್ತವ ನಿಯಂತ್ರಣ ರೇಖೆ ಬಳಿ ಸೇನಾ ಟ್ರಕ್ ಮೇಲೆ ಉಗ್ರಗಾಮಿಗಳು ಅ.24ರಂದು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 18 ರಾಷ್ಟ್ರೀಯ ರೈಫಲ್ ನ ಇಬ್ಬರು ಸೈನಿಕರು ಹಾಗೂ ಇಬ್ಬರು ಹೊರೆ ಕೂಲಿಯಾಳುಗಳು ಸೇರಿ ನಾಲ್ವರು ಮೃತಪಟ್ಟಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಒಮರ್ ಅಬ್ದುಲ್ಲಾ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ ನಾಲ್ಕನೇ ಉಗ್ರದಾಳಿ ಇದಾಗಿದ್ದು, ಈ ಘಟನೆಯಲ್ಲಿ ಇತರ ಮೂವರು ಸೈನಿಕರು ಹಾಗೂ ಇಬ್ಬರು ಪೋರ್ಟರ್ ಗಳು ಗಾಯಗೊಂಡಿದ್ದಾರೆ.
ಮೇ 4ರ ಬಳಿಕ ಇದುವರೆಗೆ ಜಮ್ಮು ಪ್ರದೇಶದಲ್ಲಿ 18 ಹಾಗೂ ಕಾಶ್ಮೀರ ಪ್ರದೇಶದಲ್ಲಿ ಆರು ಮಂದಿ ಸೇರಿ ಭದ್ರತಾ ಪಡೆಗಳ 24 ಮಂದಿ ಮೃತಪಟ್ಟಿದ್ದಾರೆ. ಕನಿಷ್ಠ 20 ಮಂದಿ ಉಗ್ರರು ಬಲಿಯಾಗಿದ್ದಾರೆ. “ಈ ಹಿಂಸಾಕೃತ್ಯಗಳು ಭಯಾನಕ ಮತ್ತು ಬೇಷರತ್ ಖಂಡನಾರ್ಹ” ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
Click