ನ್ಯೂಸ್ ನಾಟೌಟ್ : ನಿನ್ನೆ(ಅ.24) ಮಧ್ಯಾಹ್ನ 2 ಗಂಟೆ ಸುಮಾರಿಗೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಬಳಿ ಟ್ರಾಫಿಕ್ ಸಿಬ್ಬಂದಿ ವಾಹನಗಳ ದಾಖಲೆ ತಪಾಸಣೆ ನಡೆಸುತ್ತಿದ್ದರು. ಅದೇ ವೇಳೆ ಭದ್ರಾವತಿ ಕಡೆಯಿಂದ ಬಂದ ಕಾರೊಂದನ್ನ ಟ್ರಾಫಿಕ್ ಸಿಬ್ಬಂದಿ ತಡೆದಿದ್ದಾರೆ. ಈ ವೇಳೆ ಕಾರು ನಿಲ್ಲಿಸಿದ ಚಾಲಕ ಸ್ವಲ್ಪ ಹೊತ್ತಿನ ಬಳಿಕ ಪೊಲೀಸ್ ಪೇದೆಯ ಮೇಲೆಯೇ ಕಾರು ಹತ್ತಿಸಲು ಮುಂದಾಗಿದ್ದಾನೆ.
ಕಾರು ಚಾಲಕನ ವರ್ತನೆ ನೋಡಿ ಅಲ್ಲಿದ್ದ ವ್ಯಕ್ತಿಯೊಬ್ಬರು ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಪೊಲೀಸ್ ಸಿಬ್ಬಂದಿಯನ್ನ ಕಾರು ಚಲಾಯಿಸುತ್ತಾ ತಳ್ಳಿಕೊಂಡು ಬಂದ ವ್ಯಕ್ತಿ, ಆನಂತರ ಇದ್ದಕ್ಕಿದ್ದಂತೆ ಕಾರಿನ ಸ್ಪೀಡ್ ಜಾಸ್ತಿ ಮಾಡಿದ್ದಾನೆ. ಈ ವೇಳೆ ಟ್ರಾಫಿಕ್ ಸಿಬ್ಬಂದಿ ಬ್ಯಾನೆಟ್ ಮೇಲೆ ಬಿದ್ದಿದ್ದಾರೆ. ಅದಕ್ಕೂ ಕೇರ್ ಮಾಡದೆ ಕಾರು ಚಾಲಕ ಸುಮಾರು ನೂರು ಮೀಟರ್ ಗೂ ಹೆಚ್ಚು ದೂರ ಅವರನ್ನ ಎಳೆದೊಯ್ದಿದ್ದಾನೆ.
ಅದೃಷ್ಟಕ್ಕೆ ಟ್ರಾಫಿಕ್ ಸಿಬ್ಬಂದಿಯ ಜೀವಕ್ಕೆ ಅಪಾಯವಾಗಿಲ್ಲ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.