ನ್ಯೂಸ್ ನಾಟೌಟ್: ವೈದ್ಯಕೀಯ ಲೋಕದಲ್ಲಿ ಅನೇಕ ವಿಸ್ಮಯಗಳು ಆಗಾಗ ನಡೆಯುತ್ತಿರುತ್ತವೆ. ಇದೀಗ ಅಂಥದ್ದೇ ಒಂದು ಘಟನೆ ಅಮೇರಿಕಾದಲ್ಲಿ ನಡೆದಿದೆ. ಅಂತಹದ್ದೇ ವಿಸ್ಮಯ ನಡೆದು ವ್ಯಕ್ತಿಗೆ ಮರು ಜೀವ-ಜೀವನ ಎರಡೂ ಸಿಕ್ಕಿದ ಘಟನೆ ನಡೆದಿದೆ.
ಬ್ರೈನ್ ಡೆಡ್ ಎಂದು ಘೋಷಿಸಲಾದ ವ್ಯಕ್ತಿಯ ಅಂಗಾಂಗ ದಾನಕ್ಕಾಗಿ ಕುಟುಂಬಸ್ಥರ ಅನುಮತಿಯ ಮೇರೆಗೆ ವೈದ್ಯರು ಮುಂದಾಗಿದ್ದರು. ಇನ್ನೇನು ಹೃದಯ ತೆಗೆಯಬೇಕು ಅನುವಷ್ಟರಲ್ಲಿ ಬ್ರೈನ್ ಡೆಡ್ ಆಗಿರುವ ವ್ಯಕ್ತಿ ಎದ್ದು ಕುಳಿತಿದ್ದಾರೆ. ಈ ಘಟನೆ ಒಂದು ಕ್ಷಣ ವೈದ್ಯರನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆ 2021 ರಲ್ಲಿ ನಡೆದಿದ್ದರೂ, ಇದೀಗ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.
ಅಮೇರಿಕಾದ ಕೆಂಟುಕಿಯ ಥಾಮಸ್ ಎಂಬ 36 ವರ್ಷದ ವ್ಯಕ್ತಿ, ಮಾದಕವಸ್ತುವಿನ ಮಿತಿಮೀರಿದ ಸೇವನೆಯಿಂದಾಗಿ ಆತನ ಬ್ರೈನ್ ಡೆಡ್ ಆಗಿದೆ ಎಂದು ವೈದ್ಯರು ಘೋಷಿಸಿದ್ದರು. ಘಟನೆ ನಡೆದು36 ವರ್ಷ ಆಗಿದ್ದರಿಂದ ಆತನ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಮುಂದಾಗಿದ್ದರು. ಅಂದರಂತೆ ವೈದ್ಯಕೀಯ ತಂಡ ಅಂಗಾಂಗ ದಾನದ ಕಾರ್ಯದಲ್ಲಿ ಮುಂದಾಗಿತ್ತು.
ವೈದ್ಯರ ತಂಡ ಇನ್ನೇನು ದೇಹದಿಂದ ಹೃದಯವನ್ನು ತೆಗೆಯಲು ಪ್ರಯತ್ನಿಸುತ್ತಿರುವ ವೇಳೆ ಇದ್ದಕ್ಕಿದ್ದಂತೆ ಆತ ಎದ್ದು ಕುಳಿತಿದ್ದಾನೆ. ಈ ಪ್ರಕರಣ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸದ್ಯ ಈ ಘಟನೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಆತನಿಗೆ ವೈದ್ಯಕೀಯ ಲೋಕದ ವಿಸ್ಮಯ ಎಂಬಂತೆ ಮರುಜೀವ ಬಂದಂತಾಗಿದೆ.
Click