ನ್ಯೂಸ್ ನಾಟೌಟ್: ಮಧ್ಯಪ್ರದೇಶದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ದೇವಸ್ಥಾನಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳಂತಹ ಸಾರ್ವಜನಿಕ ವ್ಯವಸ್ಥೆಗಳು ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತವೆ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಕಳೆದ ಭಾನುವಾರ, ಶೈಲಬಾಲಾ ಮಾರ್ಟಿನ್ ಎಂಬ ಐಎಎಸ್ ಅಧಿಕಾರಿ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ದೇವಾಲಯಗಳು ಮತ್ತು ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ಬಳಿಕ ತೀವ್ರ ಚರ್ಚೆಗೊಳಗಾಗಿದ್ದಾರೆ.
“ಮಸೀದಿಗಳಿಂದ ಹೊರಬರುತ್ತಿರುವ ಶಬ್ದ ಜನರನ್ನು ಡಿಸ್ಟರ್ಬ್ ಮಾಡುತ್ತಿದೆ ಎಂದು ಪತ್ರಕರ್ತರೊಬ್ಬರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಐಎಎಸ್ ಅಧಿಕಾರಿ ಶೈಲಬಾಲಾ ಮಾರ್ಟಿನ್, ದೇವಸ್ಥಾನಗಳಲ್ಲಿ ಕೂಡ ಲೌಡ್ಸ್ಪೀಕರ್ಗಳನ್ನು ಹಾಕಲಾಗುತ್ತದೆ. ಅದರಿಂದಲೂ ಶಬ್ದ ಮಾಲಿನ್ಯ ಉಂಟಾಗುತ್ತದೆ” ಎಂದಿದ್ದಾರೆ.
ಹಲವಾರು ಬೀದಿಗಳಲ್ಲಿ ಕೇಳುವ ಮತ್ತು ತಡರಾತ್ರಿಯವರೆಗೆ ಮುಂದುವರಿಯುವ ದೇವಸ್ಥಾನಗಳ ಲೌಡ್ಸ್ಪೀಕರ್ಗಳ ಘೋಷಣೆಗಳು ಅನೇಕ ಬೀದಿಗಳಲ್ಲಿ ಸ್ಪೀಕರ್ಗಳ ಮೂಲಕ ಶಬ್ದ ಮಾಲಿನ್ಯವನ್ನು ಹರಡುತ್ತವೆ ಎಂದು ಐಎಎಸ್ ಅಧಿಕಾರಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಶೈಲಬಾಲಾ ಮಾರ್ಟಿನ್ ಅವರು 2009ರ ಬ್ಯಾಚ್ನ ಹಿರಿಯ ಐಎಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಮಧ್ಯಪ್ರದೇಶದ ಆಡಳಿತ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಇಂದೋರ್ನವರಾದ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ವಿವಿಧ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರು ನಿವಾರಿ ಜಿಲ್ಲೆಯ ಕಲೆಕ್ಟರ್ ಮತ್ತು ಬುರ್ಹಾನ್ಪುರದ ಮುನ್ಸಿಪಲ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಶೈಲಬಾಲಾ ಮಾರ್ಟಿನ್ 56ನೇ ವಯಸ್ಸಿನಲ್ಲಿ ವಿವಾಹವಾದರು.
Click