ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಪ್ರಕೃತಿಯ ಒಡಲನ್ನು ಬಗೆದು ಮರಳು ದಂಧೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ. ಮನುಷ್ಯನ ಸ್ವಾರ್ಥದಿಂದ ದಂಧೆಕೋರರಿಗೆ ಜೇಬು ತುಂಬ ಹಣ ಸಿಗಬಹುದು, ಆದರೆ ಭವಿಷ್ಯದಲ್ಲಿ ಮುಂದಿನ ಪೀಳಿಗೆಗೆ ಕಟ್ಟಿಕೊಡಬಹುದಾದ ಸ್ವಾಸ್ಥ್ಯ ಸಮಾಜವನ್ನು ಸಂಪೂರ್ಣವಾಗಿ ಹಾಳು ಮಾಡಿದಂತಾಗುತ್ತದೆ. ಇಲ್ಲೊಬ್ಬ ಪ್ರಭಾವಿ ವ್ಯಕ್ತಿ ತನ್ನ ಮರಳು ದಂಧೆಯ ಸ್ವರೂಪವನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಯಾದಗಿರಿ ಜಿಲ್ಲೆಯ ಸುರಪುರ ನಗರದ ಬೇಕರಿಯ ಕೇಕ್ನಲ್ಲಿ ಮರಳು ದಂಧೆ ಅನಾವರಣವಾಗಿದೆ. ಸುರಪುರದಲ್ಲಿ ಮರಳು ದಂಧೆ ನಡೆಸುವ ಪ್ರಭಾವಿಯೊಬ್ಬನ ಹುಟ್ಟು ಹಬ್ಬಕ್ಕೆ ಈ ಕೇಕ್ ತಯಾರಿಸಲಾಗಿದೆಯಂತೆ. ಮರಳು ಅಡ್ಡೆ, ಟಿಪ್ಪರ್ ಮತ್ತು ಜೆಸಿಬಿ ಇಟ್ಟು ಕೇಕ್ ಅನ್ನು ತಯಾರಿಸಲಾಗಿದೆ. ಮರಳು ಅಡ್ಡೆಯಲ್ಲಿ ಟಿಪ್ಪರ್ಗೆ ಮರಳು ತುಂಬುವುದು, ನಂತರ ಮರಳು ಸಾಗಾಟ ಮಾಡುವ ಬಗ್ಗೆ ಕೇಕ್ ಮೂಲಕ ತಿಳಿಸಲಾಗಿದೆ. ಮರಳು ದಂಧೆಯ ಕೇಕ್ ಸುರಪುರ ನಗರದಾದ್ಯಂತ ಸಾಕಷ್ಟು ಸದ್ದು ಮಾಡಿದೆ.