ನ್ಯೂಸ್ ನಾಟೌಟ್: ಶ್ರೀಘ್ರದಲ್ಲೇ ಜಿಯೋ ಸಿನಿಮಾ ರದ್ದಾಗುವ ಎಲ್ಲಾ ಸಾಧ್ಯತೆಗಳು ಇವೆ ಎನ್ನಲಾಗಿದೆ. ಈ ವಿಚಾರವಾಗಿ ರಿಲಯನ್ಸ್ ಜಿಯೋ ಮಾತೃ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಡಿಸ್ನಿ ನಡುವಿನ ಸ್ವಾಧೀನ ಒಪ್ಪಂದವು ಇದೀಗ ಬಹುತೇಕ ಅಂತಿಮಗೊಂಡಿದೆ ಎನ್ನಲಾಗಿದೆ. ಈ ಒಪ್ಪಂದದಿಂದಾಗಿ ಜೀಯೋ ಸಿನಿಮಾ ಡಿಸ್ನಿ+ಹಾಟ್ ಸ್ಟಾರ್ ಜೊತೆ ವಿಲೀನಗೊಳ್ಳುತ್ತಿದೆ.
ಈ ಬಗ್ಗೆ ಯಾವುದೇ ಸಮಯದಲ್ಲಿ ಅಧಿಕೃತವಾಗಿ ಘೋಷಣೆಯಾಗಬಹುದು. ಈ ಒಪ್ಪಂದ ಪೂರ್ಣಗೊಂಡ ನಂತರ, ಡಿಸ್ನಿಯ ಸ್ಟಾರ್ ನೆಟ್ವರ್ಕ್ನ ಸಂಪೂರ್ಣ ವ್ಯವಹಾರವು ಮುಖೇಶ್ ಅಂಬಾನಿ ಕೈಗೆ ಹೋಗುತ್ತದೆ.
ರಿಲಯನ್ಸ್ OTT ಪ್ಲಾಟ್ಫಾರ್ಮ್ ಡಿಸ್ನಿ + ಹಾಟ್ಸ್ಟಾರ್ ಅನ್ನು ಸಹ ಒಳಗೊಂಡಿರುತ್ತದೆ. ಜೊತೆಗೆ ಮುಖೇಶ್ ಅಂಬಾನಿ ಅವರ ಕಂಪನಿಯು ಎರಡು ಪ್ರತ್ಯೇಕ OTT ಪ್ಲಾಟ್ಫಾರ್ಮ್ಗಳ ಬದಲಿಗೆ ಒಂದೇ ವೇದಿಕೆಯಲ್ಲಿ ಕಾರ್ಯನಿರ್ವಹಿಸಬಹುದು ಎಂದು ಮೂಲಗಳು ತಿಳಿಸಿವೆ. ರಿಲಯನ್ಸ್ ಅಂಗ ಸಂಸ್ಥೆಯಾದ ವಯಾಕಾಮ್ 18, ಸ್ಟಾರ್ ಇಂಡಿಯಾದ ವಿಲೀನವನ್ನು ಪೂರ್ಣಗೊಳಿಸಿದ ನಂತರ ‘ಜಿಯೋ ಸಿನಿಮಾಸ್’ ‘ಡಿಸ್ನಿ+ ಹಾಟ್ಸ್ಟಾರ್’ ಜೊತೆಗೆ ವಿಲೀನಗೊಳ್ಳಬಹುದು ಎನ್ನಲಾಗಿದೆ.
ಈ ರೀತಿಯಾಗಿ, ಕಂಪನಿಯು ಅಂತಿಮವಾಗಿ ಡಿಸ್ನಿ + ಹಾಟ್ಸ್ಟಾರ್ ಪ್ಲಾಟ್ಫಾರ್ಮ್ನೊಂದಿಗೆ ಜಿಯೋ ಸಿನಿಮಾ ವಿಲೀನಗೊಂಡು ಮುಂದುವರಿಯಬಹುದು. ಇದರೊಂದಿಗೆ ಜಿಯೋ ಸಿನಿಮಾ ಕ್ಲೋಸ್ ಆಗಬಹುದು ಎನ್ನಲಾಗಿದೆ. ಜಿಯೋ ಸಿನಿಮಾ ಮೊದಲು, Viacom 18 ತನ್ನದೇ ಆದ OTT ಪ್ಲಾಟ್ಫಾರ್ಮ್ ‘Voot’ ಅನ್ನು ಹೊಂದಿತ್ತು. ಕಂಪನಿಯು ನಂತರ ಜಿಯೋ ಸಿನಿಮಾದೊಂದಿಗೆ ವಿಲೀನಗೊಂಡಿತು. ಡಿಸ್ನಿ + ಹಾಟ್ಸ್ಟಾರ್ ಜೊತೆಗೆ ಜಿಯೋ ಸಿನಿಮಾವನ್ನು ವಿಲೀನಗೊಳಿಸಲು ಒಂದು ಕಾರಣವೆಂದರೆ ಡಿಸ್ನಿ + ಹಾಟ್ ಸ್ಟಾರ್ ಗೂಗಲ್ ಪ್ಲೇ ಸ್ಟೋರ್ನಲ್ಲಿ 50 ಮಿಲಿಯನ್ ಡೌನ್ಲೋಡ್ಗಳನ್ನು ಹೊಂದಿದೆ. ಆದರೆ ಜಿಯೋ ಸಿನಿಮಾ ಡೌನ್ ಲೋಡ್ಗಳ ಸಂಖ್ಯೆ ಕೇವಲ 10 ಕೋಟಿ ಹೊಂದಿದೆ ಎನ್ನಲಾಗಿದೆ.
Click