ನ್ಯೂಸ್ ನಾಟೌಟ್: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ( KPTCL ) ಇಲಾಖೆಯು ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಜೂನಿಯರ್ ಸ್ಟೇಷನ್ ಅಟೆಂಡೆಂಟ್, ಜೂನಿಯರ್ ಪವರ್ ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಸಂಸ್ಥೆಯ ಹೆಸರು : ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ( KPTCL ), ಒಟ್ಟು ಹುದ್ದೆಗಳ ಸಂಖ್ಯೆ: 2975, ಉದ್ಯೋಗ ಸ್ಥಳ: ಕರ್ನಾಟಕ, ಹುದ್ದೆಗಳ ಹೆಸರು: ಜೂನಿಯರ್ ಸ್ಟೇಷನ್ ಅಟೆಂಡೆಂಟ್, ಜೂನಿಯರ್ ಪವರ್ಮ್ಯಾನ್.
10ನೇ ತರಗತಿ (ಎಸ್ಎಸ್ಎಲ್ಸಿ) ಪಾಸಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ನವೆಂಬರ್ 20, 2024 ರಂತೆ ಕನಿಷ್ಠ 18 ವರ್ಷಗಳಾಗಿರಬೇಕು. ಹಾಗೆಯೇ ಗರಿಷ್ಠ 35 ವರ್ಷಗಳನ್ನು ದಾಟಿರಬಾರದು.
SC/ST/Cat-I ಅಭ್ಯರ್ಥಿಗಳಿಗೆ: 5 ವರ್ಷಗಳು, Cat-2A/2B/3A & 3B ಅಭ್ಯರ್ಥಿಗಳಿಗೆ: 03 ವರ್ಷಗಳು. ಮೊದಲ ವರ್ಷದ ತಿಂಗಳ ಸಂಬಳ: ರೂ.17000 ರಿಂದ 63000/-, ಎರಡನೇ ವರ್ಷದಿಂದ ತಿಂಗಳ ಸಂಬಳ: ರೂ. 19,000/- 63000/-, ಮೂರನೇ ವರ್ಷದಿಂದ ತಿಂಗಳ ಸಂಬಳ: ರೂ. 21,000/ ರಿಂದ 63000/- ಎಂದು ತಿಳಿಸಲಾಗಿದೆ.
PWD ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕವಿಲ್ಲ, ಉಳಿದಂತೆ SC/ST ಅಭ್ಯರ್ಥಿಗಳಿಗೆ: ರೂ.378/-, ಸಾಮಾನ್ಯ/ಕ್ಯಾಟ್-I/2A/2B/3A & 3B ಅಭ್ಯರ್ಥಿಗಳಿಗೆ: ರೂ.614/- ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಲು ತಿಳಿಸಲಾಗಿದೆ.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 21-10-2024, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-ನವೆಂಬರ್-2024, ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 25 ನವೆಂಬರ್ 2024
ಹೆಚ್ಚಿನ ಮಾಹಿತಿ https://kptcl.karnataka.gov.in/ ವೆಬ್ ಸೈಟ್ ಮೂಲಕ ತಿಳಿದುಕೊಳ್ಳಬಹುದಾಗಿದೆ.
Click