ನ್ಯೂಸ್ ನಾಟೌಟ್: ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ದೇಗುಲದ ಬಳಿಯ ಹ್ಯಾಂಡ್ ಪಂಪ್ ನಲ್ಲಿ ನೀರು ಕುಡಿದ ಎಂಬ ಕಾರಣಕ್ಕೆ ಥಳಿತಕ್ಕೊಳಗಾಗಿ ಆಸ್ಪತ್ರೆ ದಾಖಲಾಗಿದ್ದಾನೆ.
24 ವರ್ಷ ವಯಸ್ಸಿನ ಅಭಿಷೇಕ್ ಗೌತಮ್ ಎಂಬಾತ ಹಲ್ಲೆಗೆ ಒಳಗಾದವರು ಎನ್ನಲಾಗಿದೆ. ಘಟನೆ ನಡೆದು ಸುಮಾರು ತಿಂಗಳೇ ಕಳೆದು ಹೋಗಿವೆ. ಜುಲೈ 26 ರಂದು ದಲಿತ ವಿದ್ಯಾರ್ಥಿ ಅಭಿಷೇಕ್ ಗೌತಮ್ ಮೇಲೆ 7 ಮಂದಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು.
ಈ ಕುರಿತಾಗಿ ಹಲ್ಲೆ ನಡೆದ ಸಂದರ್ಭದಲ್ಲೇ ಅಭಿಷೇಕ್ ಗೌತಮ್ ಪೊಲೀಸರ ಬಳಿ ದೂರು ನೀಡಿದ್ದರು. ತಮ್ಮ ವಿರುದ್ಧ ಜಾತಿ ನಿಂದನೆ ಮಾಡಿದರು, ದೈಹಿಕವಾಗಿ ಹಲ್ಲೆ ನಡೆಸಿದರು. ನನ್ನ ಕುತ್ತಿಗೆಯನ್ನು ಅವರ ಕಾಲುಗಳಿಂದ ಒತ್ತಿದರು. ನನ್ನ ನಾಲಗೆಯಿಂದ ಬಾಯಿಯಿಂದ ಹೊರಗೆಳೆದು ನೆಲವನ್ನು ನೆಕ್ಕುವಂತೆ ಮಾಡಿದರು ಎಂದು ವಿವರವಾಗಿ ದೂರು ನೀಡಿದ್ದರು. ಆದರೆ, ಯಾವುದೇ ಪ್ರಯೋಜನ ಆಗಿರಲಿಲ್ಲ. ಅಷ್ಟೇ ಅಲ್ಲ, ಈ ಕುರಿತಾಗಿ ದೂರು ನೀಡಿದರೆ ನಿನ್ನನ್ನು ಹಾಗೂ ನಿನ್ನ ಕುಟುಂಬಸ್ಥರನ್ನು ಬಿಡೋದಿಲ್ಲ ಎಂದೂ ಅಪರಿಚಿತರು ಬೆದರಿಕೆ ಹಾಕಿದ್ದರಂತೆ. ಇದೀಗ ಪೊಲೀಸ್ ವರಿಷ್ಠ ಅಧಿಕಾರಿ ಮೀನಾಕ್ಷಿ ಕಾತ್ಯಾಯನ್ ಅವರ ಗಮನಕ್ಕೆ ಪ್ರಕರಣ ಬಂದಿದೆ. ಈ ಪ್ರಕರಣ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ದೇಗುಲದ ಬಳಿ ಬಂದು ಕೂರಬೇಡ ಎಂದೂ ಕುಡ ಬೆದರಿಕೆ ಹಾಕಿದ್ದರೆ ಎಂದು ಆತ ದೂರಿನಲ್ಲಿ ತಿಳಿಸಿದ್ದಾನೆ.
ವಕೀಲರ ನೆರವಿನಿಂದ ಅಭಿಷೇಕ್ ಗೌತಮ್ ವಿಶೇಷ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಇದೀಗ ಪೊಲೀಸರಿಗೆ ನ್ಯಾಯಾಲಯದ ಸೂಚನೆ ನೀಡಿದೆ. ನ್ಯಾಯಾಲಯದ ಆದೇಶದ ಅನ್ವಯ ಪೊಲೀಸರು ಇದೀಗ 7 ಮಂದಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಹಲವು ಕಾಯ್ದೆ ಕಲಂಗಳ ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಜೊತೆಯಲ್ಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲೂ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
Click