ನ್ಯೂಸ್ ನಾಟೌಟ್: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾ ಇದೀಗ ಕೊಂಚ ಉಸಿರಾಡುವ ಸ್ಥಿತಿಗೆ ಬಂದು ತಲುಪಿದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರ ಅರ್ಧಶತಕದ ಬಳಿಕ ಯುವ ಆಟಗಾರ ಸರ್ಫರಾಜ್ ಖಾನ್ (Sarfaraz Khan) ಅವರು ಶತಕ ಸಿಡಿಸಿ ಟೀಂ ಇಂಡಿಯಾವನ್ನು ಅಪಾಯದಿಂದ ಬಹುತೇಕ ಪಾರು ಮಾಡಿದ್ದಾರೆ.
ಮೂರನೇ ದಿನದಾಟದ ಕೊನೆಯಲ್ಲಿ 70 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಸರ್ಫ್ರಾಜ್ ಖಾನ್ ಶನಿವಾರದ ಆಟದಲ್ಲಿ ಆಕರ್ಷಕ ಶತಕ ಬಾರಿಸಿ ಸಂಭ್ರಮಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಬಾರಿಸಿದ ಮೊದಲ ಶತಕ ಇದಾಗಿದೆ. ಸೌಥಿ ಎಸೆತದಲ್ಲಿ ಕವರ್ ಕಡೆಗೆ ಬೌಂಡರಿ ಬಾರಿಸುವ ಮೂಲಕ ಸರ್ಫ್ರಾಜ್ ಖಾನ್ ಖಾನ್ ಶತಕದ ಮೈಲಿಗಲ್ಲು ಸಾಧಿಸಿದರು. 110 ಎಸೆತಗಳಲ್ಲಿ ಸರ್ಫರಾಜ್ ಚೊಚ್ಚಲ ಶತಕ ಬಾರಿಸಿ ಮಿಂಚಿದರು. ಶತಕ ಪೂರ್ಣವಾದ ವೇಳೆ ಅವರು 13 ಬೌಂಡರಿ ಮತ್ತು ಮೂರು ಸಿಕ್ಸರ್ ಬಾರಿಸಿದ್ದರು.