ನ್ಯೂಸ್ ನಾಟೌಟ್: ಮಗಳು ಚೆನ್ನಾಗಿ ಓದಲಿ ಎಂದು ಬಿ.ಎಸ್ಸಿ ಪದವಿ ಅಭ್ಯಾಸಕ್ಕೆ ಮಗಳನ್ನು ಕಾಲೇಜಿಗೆ ಕಳಿಸಿದ್ದಾರೆ. ಆದರೆ, ಪಾಗಲ್ ಪ್ರೇಮಿ ಒಬ್ಬ ಪ್ರೀತಿ ಮಾಡು ಅಂತಾ ಹಿಂದೆ ಬಿದ್ದಿರುವುದಕ್ಕೆ ಬೇಸತ್ತು ಪ್ರಾಣವನ್ನೇ ಬಿಟ್ಟಿರುವ ದುರ್ಘಟನೆ ಚಿತ್ರದುರ್ಗದಲ್ಲಿ (ಅ.17) ನಡೆದಿದೆ.
ಚಿತ್ರದುರ್ಗದಲ್ಲಿ ಕಾಲೇಜು ಕಟ್ಟಡ ಮೇಲಿಂದ ಬಿದ್ದು ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಚಳ್ಳಕೆರೆ ಮೂಲದ ಪ್ರೇಮಾ (18) ಮೃತ ವಿದ್ಯಾರ್ಥಿನಿ. ಈ ಘಟನೆ ಚಿತ್ರದುರ್ಗದ ಡಾನ್ ಬೊಸ್ಕೋ ಕಾಲೇಜಿನಲ್ಲಿ ನಡೆದಿದೆ. ಇನ್ನು ಮೃತ ವಿದ್ಯಾರ್ಥಿನಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಸ್ಸಿ ಪದವಿ ಅಭ್ಯಾಸ ಮಾಡುತ್ತದ್ದಳು. ಆದರೆ, ಅವರ ಕುಟುಂಬ ಸದಸ್ಯರಿಗೆ ವಿದ್ಯಾರ್ಥಿನಿ ಪ್ರೇಮಾ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೃತ ಕಾಲೇಜು ಯುವತಿ ಪ್ರೇಮಾಗೆ ತರುಣ್ ಎಂಬ ಯುವಕ ತನ್ನನ್ನು ಪ್ರೀತಿ ಮಾಡುವಂತೆ ಕಿರುಕುಳ ನೀಡುತ್ತಿದ್ದನು ಎಂಬ ಆರೋಪ ಮಾಡಿದ್ದಾರೆ. ಪ್ರೀತ್ಸೇ ಪ್ರೀತ್ಸೆ ಎಂದು ಪೀಡಿಸಿದ ಕಾರಣಕ್ಕೆ ಯುವತಿ ಪ್ರೇಮಾ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಯುವತಿ ಜತೆ ತರುಣ್ ಎಂಬ ಯುವಕ ವಾಟ್ಸಪ್ ಚಾಟ್ ಮಾಡಿರುವ ಮಾಹಿತಿಯನ್ನು ಆಕೆಯ ಪೋಷಕರು ಪೊಲೀಸರಿಗೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಯತ್ತಿದೆ.
Click