ನ್ಯೂಸ್ ನಾಟೌಟ್: ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೆ ಎಸ್ ಗೌಡ ವಿದ್ಯಾ ಸಂಸ್ಥೆ, ನಿಂತಿಕಲ್ಲು ಶಾಲೆಯ ಮಕ್ಕಳು ಶೇ.100 ಫಲಿತಾಂಶ ತಂದಿದ್ದಾರೆ. ಒಟ್ಟು 10 ಮಂದಿ ಪರೀಕ್ಷೆಗೆ ಹಾಜರಾಗಿದ್ದು ಇದರಲ್ಲಿ 5 ಡಿಸ್ಟಿಂಕ್ಷನ್ ಹಾಗೂ 5 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.
ದರ್ಶನ್ ಗೌಡ ಆರ್ವಾರ 625 ಕ್ಕೆ 588 (ಶೇ.94.08) ಅಂಕ ಪಡೆದುಕೊಂಡು ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಜರ್ನಾದನ ಆರ್ವಾರ -ಕಮಲಾಕ್ಷಿ ಆರ್ವಾರ ಅವರ ಪುತ್ರರಾಗಿದ್ದಾರೆ. ಮತ್ತೋರ್ವ ವಿದ್ಯಾರ್ಥಿ ಪೃಥ್ವಿಜಿತ್ ಎ ರೈ ಗೆಜ್ಜೆಮನೆ 625 ಕ್ಕೆ 577 ಅಂಕ ಪಡೆದುಕೊಂಡು ದ್ವಿತೀಯ ಸ್ಥಾನಿಯಾಗಿದ್ದಾರೆ. ಇವರು ಅರುಣ್ ಕುಮಾರ್ ರೈ -ದಿವ್ಯಾ ಎ ರೈ ಅವರ ಸುಪುತ್ರರಾಗಿದ್ದಾರೆ.