ನ್ಯೂಸ್ ನಾಟೌಟ್: ವಕೀಲರೊಬ್ಬರು ಪೊಲೀಸರೆದುರೇ ಲಕ್ನೊದ ಲಖೀಂಪುರ್ ಖೇರಿ ಶಾಸಕ ಯೋಗೇಶ್ ವರ್ಮ ಎಂಬಾತನಿಗೆ ಇಂದು(ಅ.9) ಕಪಾಳ ಮೋಕ್ಷ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ಕಪಾಳ ಮೋಕ್ಷದ ಬೆನ್ನಿಗೇ ಶಾಸಕನ ಬೆಂಬಲಿಗರು ಹಲ್ಲೆ ನಡೆಸಿದ್ದು, ವಕೀಲರ ಮೇಲೆ ದಾಳಿ ಮಾಡಿದ್ದಾರೆ. ಆಗ ಮಧ್ಯಪ್ರವೇಶಿಸಿರುವ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಶಾಸಕನ ಮೇಲೆ ಹಲ್ಲೆ ನಡೆಸಿದ ವಕೀಲನನ್ನು ಸ್ಥಳೀಯ ಬಾರ್ ಅಸೋಸಿಯೇಷನ್ ನ ಅಧ್ಯಕ್ಷ ಅವಧೇಶ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಘಟನೆಯು ನಗರ ಸಹಕಾರ ಬ್ಯಾಂಕ್ ಆಡಳಿತ ಸಮಿತಿಯ ಚುನಾವಣೆ ನಡೆಯುವ ವೇಳೆ ನಡೆದಿದ್ದು, ಈ ಪ್ರದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ.
Click