ನ್ಯೂಸ್ ನಾಟೌಟ್: ಪ್ರತಿ ವರ್ಷದಂತೆ ಈ ಸಲವೂ ತಾಯಿ ಶಾರದಾಂಬೆಯ ದಸರಾ ಮೆರವಣಿಗೆ ಸುಳ್ಯದಲ್ಲಿ ಅದ್ದೂರಿಯಾಗಿ ನೆರವೇರಿದೆ. ನೂರಾರು ಭಕ್ತರು ತಾಯಿ ಶಾರದೆಯ ನಾಮಸ್ಮರಣೆ ಮಾಡುತ್ತಾ ಚೆನ್ನ ಕೇಶವ ದೇವಸ್ಥಾನದ ಮುಂಭಾಗದತ್ತ ಹೆಜ್ಜೆ ಹಾಕಿದ್ದು ಆಕರ್ಷಣೀಯವಾಗಿತ್ತು. ವಾದ್ಯಗೋಷ್ಟಿ, ಪುಷ್ಪಾಲಂಕಾರದಿಂದ ಸಾಕ್ಷಾತ್ ಶಾರದೆಯೇ ಸುಳ್ಯಕ್ಕೆ ಧರೆಗಿಳಿದು ಬಂದಂತೆ ಕಂಡು ಬಂದ ದೃಶ್ಯವನ್ನು ರಸ್ತೆಯ ಪ್ರತಿ ಮೂಲೆಗಳಲ್ಲೂ ನಿಂತು ಜನ ಕಣ್ತುಂಬಿಕೊಂಡರು.
ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಸುಳ್ಯ, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು ಹಾಗೂ ಸುಳ್ಯ ಶ್ರೀ ಶಾರದಾಂಬ ಉತ್ಸವ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಶಾರದಾಂಬ ದಸರಾವನ್ನು ಆಚರಿಸಲಾಗುತ್ತಿದೆ.
ಇದು 53ನೇ ವರ್ಷದ ಶ್ರೀ ಶಾರದಾಂಬ ಸುಳ್ಯ ದಸರಾ ಉತ್ಸವ ಅನ್ನೋದು ವಿಶೇಷ. ಇಂದಿನಿಂದ (ಅಕ್ಟೋಬರ್-9) ಉತ್ಸವಕ್ಕೆ ಚಾಲನೆ ದೊರಕಿದೆ. ಬೆಳಗ್ಗೆ 7 ಗಂಟೆಗೆ ಗಣಪತಿ ಹವನ, ಬೆಳಗ್ಗೆ 9ರಿಂದ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಿಂದ ಶ್ರೀ ಶಾರದಾ ದೇವಿಯ ವಿಗ್ರಹದ ಪ್ರತಿಷ್ಠಾ ಮೆರವಣಿಗೆಯು ಹೊರಟು ನಂತರ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಪ್ರತಿಷ್ಠಾಪನೆಗೊಂಡಿದೆ. ಮಧ್ಯಾಹ್ನ ಮಹಾಪೂಜೆ ನಡೆಯಲಿದೆ. ಭಜನಾ ಕುಣಿತ ಭಜನೆಯೊಂದಿಗೆ ಅದ್ದೂರಿ ಹಸಿರುವಾಣಿ ಮೆರವಣಿಗೆಯೂ ಸಾಗಿ ಬರಲಿದೆ.
Click