ನ್ಯೂಸ್ ನಾಟೌಟ್: ಸುಳ್ಯ ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ನವೀಕೃತಗೊಂಡು ‘ಕೂಲ್ ಮೊಬೈಲ್ ಶೋರೂಂ’ ಅ.5 ರಂದು ಆರಂಭಗೊಂಡಿದೆ.
ರಫೀಕ್ ಕೆರೆಮೂಲೆ ಮಾಲೀಕತ್ವದ ಶೋ ರೂಂಗೆ ಜನರಿಂದ ಈಗಾಗಲೇ ಗುಡ್ ರೆಸ್ಪಾನ್ಸ್ ಸಿಕ್ಕಿದೆ. ಶೋರೂಂ ಉದ್ಘಾಟನೆಯನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷರಾದ ಪಿ. ಬಿ. ಸುಧಾಕರ ರೈ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಗಾಂಧಿನಗರ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಹಾಗೂ ನಗರ ಪಂಚಾಯತ್ ನ ಮಾಜಿ ಸದಸ್ಯ ಹಾಜಿ ಕೆ.ಎಂ ಮುಸ್ತಫ, ನಗರ ಪಂಚಾಯತ್ ಸದಸ್ಯ ಕೆ.ಎಸ್ ಉಮ್ಮರ್, ಬಿ.ಎಂ.ಎಸ್ ಆಟೋ ಚಾಲಕ-ಮಾಲಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ,ಶರೀಫ್ ಕಂಠಿ, ಮೊಬೈಲ್ ರಿಟೇಲ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ರಹಿಮಾನ್, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ಉಧ್ಯಮಿಗಳಾದ ಅಬ್ದುಲ್ ಖಾದರ್ ಹಾಜಿ ಕೆರೆಮೂಲೆ, ಹಾಜಿ ಅಬೂಬಕ್ಕರ್ ಜಟ್ಟಿಪಳ್ಳ, ಎಂ.ಬಿ ಯಹ್ಯಾ, ಅನ್ವರ್ ಪಂಜಿಕಲ್ಲು,ಹಾಜಿ ಅಬ್ದುಲ್ ಕಲಾಂ ಕಟ್ಟೆಕ್ಕಾರ್, ಸಿದ್ದೀಕ್ ಕಟ್ಟೆಕ್ಕಾರ್, ಮಜೀದ್ ಸಿಟಿ ಮೆಡಿಕಲ್,ಸಂಶುದ್ದೀನ್ ಭಾರತ್ ಉಪಸ್ಥಿತರಿದ್ದರು.
Click