ನ್ಯೂಸ್ ನಾಟೌಟ್: ಸುಳ್ಯದಲ್ಲಿ ಹತ್ತಾರು ಬಟ್ಟೆ ಮಳಿಗೆಗಳಿವೆ. ಈ ಸಾಲಿಗೆ ಇದೀಗ ಮತ್ತೊಂದು ಸಂಸ್ಥೆ ಸೇರ್ಪಡೆಯಾಗಲಿದೆ. ‘ರೊಮ್ಯಾಂಟಿಕ್’ ಎಂಬ ಹೆಸರಿನಡಿಯಲ್ಲಿ ಸೆ.11ರಿಂದ ಸುಳ್ಯದ ರಥ ಬೀದಿಯಲ್ಲಿ ಶುಭಾರಂಭಗೊಳ್ಳಲು ಸರ್ವ ಸಿದ್ಧತೆ ನಡೆಯುತ್ತಿದೆ.
ಶುಭಾರಂಭಗೊಳ್ಳುವ ನಿಟ್ಟಿನಲ್ಲಿ ಸಂಸ್ಥೆಯು ರೂ.1500, ರೂ.5000 ಹಾಗೂ ರೂ.10000 ಮೇಲ್ಪಟ್ಟ ಮೌಲ್ಯದ ಬಟ್ಟೆ ಖರೀದಿಗೆ ವಿಶೇಷವಾದ ಬೆಳ್ಳಿಯ ಉಚಿತ ಉಡುಗೊರೆಗಳನ್ನು ನೀಡುತ್ತಿದೆ. ಅಲ್ಲದೆ ಪ್ರತಿ ಬಟ್ಟೆ ಖರೀದಿಗೂ ಗ್ರಾಹಕರಿಗೆ ಅಚ್ಚರಿಯ ಡಿಸ್ಕೌಂಟ್ ಸಿಗಲಿದೆ. ನೂತನ ಮಳಿಗೆಯಲ್ಲಿ ಎಲ್ಲಾ ಬ್ರ್ಯಾಂಡೆಡ್ ಕಂಪನಿಗಳ ವಸ್ತ್ರಗಳು, ಪುರುಷರ,ಮಹಿಳೆಯರ ಹಾಗೂ ಮಕ್ಕಳ ಅತ್ಯಾಕರ್ಷಕ ಉಡುಪುಗಳು ದೊರೆಯಲಿದೆ. ಉತ್ತಮ ಗುಣಮಟ್ಟದ ಇನ್ನರ್ ವೇರ್, ಹೋಮ್ ವೇರ್, ಹ್ಯಾಂಡ್ ಲೂಮ್, ನ್ಯೂ ಬೋರ್ನ್ ವೇರ್, ಕುರ್ತೀಸ್, ವೆಸ್ಟರ್ನ್ ವೇರ್ ಮಿತದರದಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ.