ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ ಯಾರಿಗಿಲ್ಲ ಹೇಳಿ, ಪ್ರತಿಯೊಂದು ಫೀಲ್ಡ್ ನಲ್ಲಿ ಇರುವವರು ಕೂಡ ಪ್ರತಿ ದಿನ ಮಂಡೆ ಬಿಸಿ ಮಾಡಿಕೊಂಡೇ ಬದುಕುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ನಮಗೆ ನೀಡುತ್ತಿರುವ ಕೆಲಸದ ಒತ್ತಡವೇ ಹೆಚ್ಚಾಗುತ್ತಿದೆ ಎಂದು ವಿಎ (ವಿಲೇಜ್ ಅಕೌಂಟೆಂಟ್) ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಓ) ಇದೀಗ ತೀವ್ರ ಅಸಮಾಧಾನಗೊಂಡಿದ್ದಾರೆ.
ನಾಳೆ ಶುಕ್ರವಾರ ಬೆಂಗಳೂರಿನ ಫ್ರೀ ಡಂ ಪಾರ್ಕ್ ನಲ್ಲಿ ಒಂದು ಪ್ರತಿಭಟನೆ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಈ ನಡುವೆಯೇ ಒಂದು ಮಾತು ಕೇಳಿ ಬರ್ತಿದೆ , ಕೆಲವು ಪಿಡಿಓ, ವಿಎಗಳು ಜನರಿಂದ ಸಿಕ್ಕಾಪಟ್ಟೆ ತಿಂದು ಕೊಬ್ಬಿ ಗೂಳಿಗಳಂತೆ ಆಗಿದ್ದಾರೆ. ಇವರು ಕೆಲಸದ ಒತ್ತಡದಲ್ಲಿ ಇರುವುದು ಹೇಗೆ..? ಸಂಬಳಕ್ಕೆ ಸಂಬಳವೂ ಆಯಿತು, ಗಿಂಬಳಕ್ಕೆ ಗಿಂಬಳವೂ ಮಾಡಿಕೊಳ್ತಿದ್ದಾರೆ. ಇರುವುದು ಬೆಳಗ್ಗಿನಿಂದ ಸಂಜೆ ತನಕ ಕೆಲಸ, ಅಷ್ಟಿದ್ದರೂ ಇವರಿಗೆ ಕೆಲಸ ಒತ್ತಡ ಅನ್ನುವುದು ಹಾಸ್ಯಾಸ್ಪದ ಅಲ್ಲವೇ..? ಎಂದು ಬುದ್ಧಿ ಜೀವಿಗಳು ಈಗ ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿಕೊಂಡಿದ್ದಾರೆ.
ಈಗ ದಸರಾ ಸಮಯ, ನಮ್ಮ ಪೊಲೀಸ್ ಇಲಾಖೆಯವರಿಗೆ ರಾತ್ರಿ ಹಗಲು ಡಬಲ್ ಡ್ಯೂಟಿ, ಜೊತೆಗೆ ರಾತ್ರಿಯಿಡೀ ಸೊಳ್ಳೆಗಳಿಂದ ರಣಭಯಂಕರವಾಗಿ ಕಚ್ಚಿಸಿಕೊಂಡು ಬೆಳಗ್ಗೆ ಮನೆಗೆ ಬಂದು ದೋಸೆ ಚಟ್ನಿ ತಿಂದು ಮಲಗಿ ಎದ್ದು ಮತ್ತೆ ಅದೇ ಡ್ಯೂಟಿ ಮಾಡುವ ಕರ್ಮ. ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ ಮೇಲಾಧಿಕಾರಿಗಳಿಂದ ಸಸ್ಪೆಂಡ್ ಆರ್ಡರ್. ಈ ಭಯದಿಂದಲೇ ಹೆಂಡತಿ – ಮಕ್ಕಳು ಕುಟುಂಬವನ್ನು ನೆನೆದು ಪೊಲೀಸರು ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುವುದೇ ಮೇಲು ಎಂದು ಸುಮ್ಮನಿದ್ದಾರೆ.
ಆದರೆ ಈ ವಿಎ ಮತ್ತು ಪಿಡಿಓಗಳು ವಿವಿಧ ಬೇಡಿಗಳನ್ನು ಈಡೇರಿಸುವಂತೆ ಪ್ರತಿಭಟನೆ ಮೊರೆ ಹೋಗಿರುವುದು ಈಗ ಹಲವರ ಕಣ್ಣು ಕೆಂಪಗಾಗಿಸಿದೆ. ಈಗಾಗಲೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಕಡತಗಳು ಹಾಗೆಯೇ ಕೆಲಸ ಮಾಡದೆ ಬಾಕಿ ಉಳಿದಿದೆ. ಇದರ ವಿರುದ್ಧ ನಾಗರೀಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆಯೇ ಇವರು ಪ್ರತಿಭಟನೆಗೆ ಸಿದ್ಧವಾಗಿದ್ದಾರೆ. ಕೆಸಿಎಸ್ಆರ್ ನಿಯಮ ಪ್ರಕಾರ ಪ್ರತಿಭಟನೆ ಮಾಡುವುದಕ್ಕೆ ಸರ್ಕಾರಿ ಅಧಿಕಾರಿಗಳಿಗೆ ಅವಕಾಶವಿಲ್ಲ. ಆದರೂ ಸಿಕ್ಕಿದ್ದೇಗೆ ಅನ್ನುವುದು ಈಗ ಅಚ್ಚರಿಗೆ ಕಾರಣವಾಗಿದೆ.
Click