ನ್ಯೂಸ್ ನಾಟೌಟ್ : ವಾರಣಾಸಿಯ ದೇವಾಲಯಗಳಿಂದ ಸಾಯಿಬಾಬಾ ಮೂರ್ತಿಗಳನ್ನು ತೆರವು ಅಭಿಯಾನ ನಡೆಸುತ್ತಿದ್ದ ಸ್ಥಳೀಯ ಹಿಂದೂ ಸಂಘಟನೆಯಾದ ಸನಾತನ ರಕ್ಷಕ ದಳದ ಮುಖ್ಯಸ್ಥನನ್ನು ಶಾಂತಿ ಭಂಗದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ(ಅ.03) ತಿಳಿಸಿದ್ದಾರೆ.
ಕಳೆದ ಮಂಗಳವಾರ ಇಲ್ಲಿನ ಹಲವು ದೇವಾಲಯಗಳಿಂದ ಸಾಯಿಬಾಬಾ ಮೂರ್ತಿಗಳನ್ನು ಸನಾತನ ರಕ್ಷಕ ದಳದ ಸದಸ್ಯರು ತೆರವುಗೊಳಿಸಿದ ನಂತರ ಸ್ಥಳೀಯ ಸಂಘಟನೆಯ ಮುಖ್ಯಸ್ಥ ಅಜಯ್ ಶರ್ಮಾ ಅವರನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ.
ಶಾಂತಿ ಭಂಗದ ಆರೋಪದ ಮೇಲೆ ಶರ್ಮಾ ಅವರನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಲೊಹಾಟಿಯಾದ ಬಡಾ ಗಣೇಶ ದೇವಸ್ಥಾನದಲ್ಲಿರುವ ಸಾಯಿಬಾಬಾ ವಿಗ್ರಹ ಸೇರಿದಂತೆ ಇದುವರೆಗೆ 14 ದೇವಸ್ಥಾನಗಳಿಂದ ಸಾಯಿಬಾಬಾ ವಿಗ್ರಹವನ್ನು ತೆಗೆದುಹಾಕಲಾಗಿದೆ ಎಂದು ಶರ್ಮಾ ಬುಧವಾರ ಹೇಳಿದ್ದಾರೆ ಮತ್ತು ಇನ್ನೂ 50 ದೇವಾಲಯಗಳಿಂದ ಸಾಯಿಬಾಬಾ ವಿಗ್ರಹವನ್ನು ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ಕ್ರಮಕ್ಕೆ ಹಲವು ಸಾಯಿಬಾಬಾ ಭಕ್ತರು ವಿರೋಧ ವ್ಯಕ್ತಪಡಿಸಿದ್ದಾರೆ ಮತ್ತು ದೇವಾಲಯಗಳ ಭದ್ರತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
Click