ನ್ಯೂಸ್ ನಾಟೌಟ್: ಎಸ್ಐಟಿ ಅಧಿಕಾರಿಗಳು ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಮುನಿರತ್ನ ಮನೆ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಲ್ಯಾಪ್ಟಾಪ್ ಮತ್ತು ಪೆನ್ಡ್ರೈವ್ಗಳಲ್ಲಿ ಕೆಲ ರಾಜಕೀಯ ನಾಯಕರ ಖಾಸಗಿ ಕ್ಷಣದ ವಿಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ.
ಮುನಿರತ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ, ಸುಲಿಗೆ, ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣಗಳ ತನಿಖೆಯನ್ನು ಎಸ್ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ತನಿಖೆಯ ಭಾಗವಾಗಿ ಸೆಪ್ಟೆಂಬರ್ 28ರಂದು ಅಧಿಕಾರಿಗಳು ಮುನಿರತ್ನ ನಿವಾಸ, ಕಚೇರಿ ಸೇರಿದಂತೆ 12 ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಿಢೀರ್ ದಾಳಿ ನಡೆಸಿದ್ದರು.
ವೈಯಾಲಿ ಕಾವಲ್ನಲ್ಲಿರುವ ಮುನಿರತ್ನರ ಮನೆಯಲ್ಲಿ ಶೋಧ ಕಾರ್ಯಾಚರಣೆ ವೇಳೆ ಸಿಕ್ಕ ಲ್ಯಾಪ್ಟಾಪ್ ಮತ್ತು ಪೆನ್ಡ್ರೈವ್ಗಳಲ್ಲಿ ಕೆಲ ರಾಜಕೀಯ ನಾಯಕರ ಹಾಗೂ ಸರ್ಕಾರಿ ಅಧಿಕಾರಿಗಳ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ.
ಮಹಿಳೆಯರ ಅಶ್ಲೀಲ ದೃಶ್ಯಗಳು ವಿಡಿಯೊದಲ್ಲಿವೆ. ಹನಿಟ್ರ್ಯಾಪ್ ಮೂಲಕ ಈ ವಿಡಿಯೊಗಳನ್ನು ಚಿತ್ರೀಕರಿಸಿಕೊಂಡಿರುವ ಶಂಕೆಯಿದೆ ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಲ್ಯಾಪ್ಟಾಪ್ ಮತ್ತು ಪೆನ್ಡ್ರೈವ್ಗಳಲ್ಲಿಸಿಕ್ಕಿರುವ ವಿಡಿಯೊಗಳು ಅಸಲಿಯೇ ಅಥವಾ ನಕಲಿಯೇ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಹೆಚ್ಚಿನ ಪರಿಶೀಲನೆಗಾಗಿ ಲ್ಯಾಪ್ಟಾಪ್, ಪೆನ್ಡ್ರೈವ್ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ ಎಸ್ ಎಲ್) ಕಳುಹಿಸಲಾಗಿದೆ.
Click