ನ್ಯೂಸ್ ನಾಟೌಟ್: ಕೊಡಗಿನ ಪೊನ್ನಂಪೇಟೆಯಲ್ಲಿ ಬಜರಂಗದಳ ಕಾರ್ಯಕರ್ತರಿಗೆ ನಡೆದಿರುವ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿಯಲ್ಲಿ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಬಜರಂಗ ದಳ ಸ್ಪಷ್ಟಪಡಿಸಿದೆ.
116 ಕಾರ್ಯಕರ್ತರಿಗೆ ಶಾರೀರಿಕ, ಮಾನಸಿಕ ಸದೃಢಕ್ಕೆ ಶಿಬಿರ ಏರ್ಪಡಿಸಿದ್ದೆವು. ಬೆಳಗ್ಗೆ 4.15ರಿಂದ ರಾತ್ರಿ 10.15ರವರಗೆ ಶಿಬಿರದಲ್ಲಿ ಪಾಲ್ಗೊಂಡಿದ್ದರು.ಅಲ್ಲಿ ಬಳಸಿರುವುದು ಏರ್ ಗನ್, ಇದು ನಾರ್ಮ್ಸ್ ಆಕ್ಟ್ ನಡಿ ಬರುವುದಿಲ್ಲ. ತ್ರಿಶೂಲವೂ ನಾರ್ಮ್ಸ್ ಆಕ್ಟ್ ನಲ್ಲಿ ಬರಲ್ಲ, ಏಕೆಂದರೆ ಅದು ಶಾರ್ಪ್ ಆಗಿಲ್ಲ, ಧರ್ಮ ಚಿಂತನೆಯಲ್ಲಿ ಕೊಟ್ಟಿದ್ದೇವೆ ಹೊರತು ಇದರಲ್ಲಿ ಬೇರೆ ಯಾವ ಉದ್ದೇಶವೂ ಇಲ್ಲ ಎಂದು ಚಿಕ್ಕಮಗಳೂರಿನಲ್ಲಿ ಭಜರಂಗದಳ ಪ್ರಾಂತ ಸಂಚಾಲಕ ರಘು ಸಕಲೇಶಪುರ ಹೇಳಿಕೆ ನೀಡಿದ್ದಾರೆ. ದೇಶದ 33 ರಾಜ್ಯದ ಎಲ್ಲಾ ಕಡೆ ಪ್ರತಿ ವರ್ಷ ದೀಕ್ಷೆ ನೀಡುವ ಕಾರ್ಯಕ್ರಮ ನಡೆಯುತ್ತಿದೆ. ಪಿ.ಎಫ್.ಐ, ಎಸ್.ಡಿ.ಪಿ.ಐ ಅವರಿಗೆ ಭಜರಂಗದಳದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ತಿಳಿಸಿದ್ದಾರೆ.