ನ್ಯೂಸ್ ನಾಟೌಟ್: ಯುವಜನತೆ, ಯುವಕ ಸಂಘಗಳು ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನವಹಿಸಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಹೇಳಿದರು.
ಸುಳ್ಯದ ಕೇರ್ಪಳ ಪಯಸ್ವಿನಿ ಯುವಕ ಮಂಡಲದ ಆಶ್ರಯದಲ್ಲಿ ಅ.2 ರಂದು ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಸ್ಮಡ್ಕ ಜಂಕ್ಷನ್ ನಿಂದ ಕೆ.ವಿ.ಜಿ. ಕ್ಯಾಂಪಸ್ ರಸ್ತೆಯ ಎರಡು ಬದಿಗಳಲ್ಲಿನ ಕಸಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು. ಯುವಕ ಮಂಡಲದ ಅಧ್ಯಕ್ಷ ಭರತ್ ಕುರುಂಜಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮಂಡಲ ಪ್ರಧಾನರಾದ ಕೆ.ಸಿ.ಸದಾನಂದ ಹಾಗೂ ಸುಳ್ಯ ಸಿ.ಎ.ಬ್ಯಾಂಕ್ ನಿರ್ದೇಶಕ ಶಿವರಾಮ ಕೇರ್ಪಳ ಶುಭಹಾರೈಸಿದರು. ಸುಳ್ಯ ನಗರ ಪಂಚಾಯತ್ ಸದಸ್ಯರಾದ ಪೂಜಿತಾ ಕೆ.ಯು., ಸುಧಾಕರ ಕುರುಂಜಿಭಾಗ್, ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಕೆ.ಸಿ.ಶಿವಾನಂದ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಅರೆಭಾಷೆ ಅಕಾಡೆಮಿ ಸದಸ್ಯ ಡಾ.ಎನ್.ಎ.ಜ್ಞಾನೇಶ್, ಮೇದಪ್ಪ ಗೌಡ ನೆಕ್ರಾಜೆ, ವಸಂತ (ಬೃಂದ) ಕುರುಂಜಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವಿಶ್ವನಾಥ ನೆಲ್ಲಿಬಂಗಾರಡ್ಕ, ಉಪನ್ಯಾಸಕ ಶ್ರೀಧರ, ಗಂಗಾಧರ್ ಕುರುಂಜಿ, ಪುರುಷೋತ್ತಮ ಭಸ್ಮಡ್ಕ, ನಗರ ಗೌಡ ಸಂಘದ ಕಾರ್ಯದರ್ಶಿ ರಾಧಾಕೃಷ್ಣ ಕುಂತಿನಡ್ಕ, ಯುವಕ ಮಂಡಲದ ಕಾರ್ಯದರ್ಶಿ ಹೇಮಪ್ರಕಾಶ ಕುಂತಿನಡ್ಕ ಪದಾಧಿಕಾರಿಗಳು, ಸ್ಥಳೀಯರು ಪಾಲ್ಗೊಂಡಿದ್ದರು. ವಿನ್ಯಾಸ ಕುರುಂಜಿ ಸ್ವಾಗತಿಸಿದರು. ಲಕ್ಷ್ಮೀಶ್ ದೇವರಕಳಿಯ ವಂದಿಸಿದರು. ಚಂದ್ರಶೇಖರ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.