ನ್ಯೂಸ್ ನಾಟೌಟ್: ದ ಕ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸುಳ್ಯ, ಸಂಪಾಜೆ ಗ್ರಾಮ ಪಂಚಾಯತ್ ಇದರ ಸಂಯುಕ್ತ ಆಶ್ರಯದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಕ್ರೀಟ್ ರಸ್ತೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಮತ್ತು ಗಡಿಕಲ್ಲು ನೂತನ ಅಂಗನವಾಡಿ ಕಟ್ಟಡ ಹಾಗೂ ಘನತ್ಯಾಜ್ಯ ಘಟಕದ ಕಟ್ಟಡಕ್ಕೆ ಶಿಲಾನ್ಯಾಸ ಹಾಗೂ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ ಮೇ.20ರಂದು ಸಂಜೆ 5 ಗಂಟೆಗೆ ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ.
ಬಂದರು ಮತ್ತು ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ವಿವಿಧ ಸವಲತ್ತುಗಳ ವಿತರಣೆ ಹಾಗೂ ಸಂಪಾಜೆ ಗ್ರಾಮ ಪಂಚಾಯತ್ ನ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಲಿರುವರು. ಕರ್ನಾಟಕ ವಿಧಾನಪರಿಷತ್ ನ ವಿಪಕ್ಷ ನಾಯಕ ಹರಿಪ್ರಸಾದ್ ಬಿ.ಕೆ. ಸಂಪಾಜೆ ಗ್ರಾಮದ ಗೂನಡ್ಕ ದರ್ಕಾಸ್ತುಹಿಲ್ ರಸ್ತೆಯ ಸಂಪಾಜೆ ಗ್ರಾ ದರ್ಖಾಸ್ತು ಕೊಪ್ಪತ್ತಕಜೆ ಹಾಗೂ ದರ್ಕಾಸ್ತು ಅಂಗನವಾಡಿ ಬಳಿ ಕಾಂಕ್ರೀಟ್ ರಸ್ತೆ ಉದ್ಘಾಟನೆ ನೆರವೇರಿಸಲಿರುವರು. ಸಂಪಾಜೆ ಗ್ರಾಮದ ಚಟ್ಟೆ ಕಲ್ಲು ರಸ್ತೆ ಉದ್ಘಾಟನೆ, ಸಂಪಾಜೆ ಗ್ರಾಮದ ಕಡೆಪಾಲ ಕುಯಿಂತೋಡು ರಸ್ತೆ ಉದ್ಘಾಟನೆ, ಸಂಪಾಜೆ ಗ್ರಾಮ ಪಂ ನ ಗಡಿಕಲ್ಲು ಅಂಗನವಾಡಿ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ, ಸಂಪಾಜೆ ಗ್ರಾಮದ ಪೆಲತ್ತಡ್ಕ ಕೊಪ್ಪತ್ತಕಜೆ ರಸ್ತೆಗೆ ಶಿಲಾನ್ಯಾಸವನ್ನು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ನೆರವೇರಿಸಲಿರುವರು. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ ಕೆ ಹಮೀದ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಡೆಪಾಲ ಕುಯಿಂತೋಡು ಕಾಂಕ್ರೀಟ್ ಕಾಮಗಾರಿ ಸಂಪಾಜೆ ಗ್ರಾಮದ ಬೈಲೆ ಉಳ್ಳಾಕುಳು ದೈವಸ್ಥಾನಕ್ಕೆ ಇಂಟರ್ ಲಾಕ್ ಅಳವಡಿಕೆ ಕಾಮಗಾರಿಗಳಿಗೆ ಶಿಲಾನ್ಯಾಸವನ್ನು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ನೆರವೇರಿಸಲಿರುವರು . ಕಡೆಪಾಲ ಪ.ಜಾತಿ ಕಾಲನಿ ರಸ್ತೆ ಕಾಂಕ್ರಿಟೀಕರಣ, ಗ್ರಾಮದ ಬಂಗ್ಲೆಗುಡ್ಡೆ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸವನ್ನು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರು ನೆರವೇರಿಸಲಿದ್ದಾರೆ. ಸಂಪಾಜೆ ಗ್ರಾಮ ಪಂಚಾಯತ್ ಬಾಚಿ ಗದ್ದೆರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸವ ಕೇಂದ್ರ ನಾರು ಮಂಡಳಿಯ ಮಾಜಿ ಸದಸ್ಯ ಟಿ. ಎಂ. ಶಹೀದ್ ನೆರವೇರಿಸಲಿದ್ದಾರೆ. ಕೈಪಡ್ಕ ಕೀಲಾರು ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗಳಿಗೆ ಶಿಲಾನ್ಯಾಸವನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಸಂಪಾಜೆ ಜನತಾ ಕಾಲನಿ ಕಾಂಕ್ರೀಟ್ ರಸ್ತೆ ಉದ್ಘಾಟನೆ, ಗೂನಡ್ಕ ಪೆರುಂಗೋ ಡಿ ಕಾಲುಸಂಕ ಶಂಕುಸ್ಥಾಪನೆಯನ್ನು ತಾಪಂ ಮಾಜಿ ಉಪಾಧ್ಯಕ್ಷ ಪಿ ಸಿ ಜಯರಾಮ ನೆರವೇರಿಸಲಿದ್ದಾರೆ. ಸಂಪಾಜೆಯ ಕೊರಂ ಕಾಂಕ್ರಿಟೀಕರಣಕ್ಕೆ ಶಿಲನ್ಯಾಸವನ್ನು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋ ಮಶೇಖರ ಕೆ ಆರ್ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾ.ಪಂ. ಮಾಜಿ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಸಂಪಾಜೆ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಪಿ. ಜಗದೀಶ್, ಸಂಪಾಜೆ ಕೃಷಿ ಸಹಕಾರಿ ಸಂಘದ ನಿರ್ದೇಶಕ ಗಣಪತಿ ಭಟ್ ಪಿ.ಎಸ್. ಉಪಸ್ಥಿತರಿರುವರು. ತಾಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಜಿ ಪಂ ಎಂಜಿನಿಯರಿಂಗ್ ಉಪವಿಭಾಗ ಸುಳ್ಯದ ಸಹಾಯಕ ಕಾರ್ಯಪಾಲಕ ಅಭಿಯಂ ಹನುಮಂತರಾಯಪ್ಪ, ಸುಳ್ಯ ಗ್ರಾಮೀಣ ಕುಡಿಯುವ ನೀರು ಮತ್ತುನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸುಂದರಯ್ಯ, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ. ಜಗದೀಶ್ ರೈ, ಮಹಮ್ಮದ್ ಕುಂಞಿ ಗೂನಡ್ಕ, ಬಿ.ಎಸ್.ಯಮುನಾ, ಯಶೋಧಾ ಶ್ರೀಧರ್, ಸುಂದರಿ ಮುಂಡಡ್ಕ ಗೌರವ ಉಪಸ್ಥಿತರಿರಲಿದ್ದಾರೆ ಎಂದು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ತಿಳಿಸಿದ್ದಾರೆ.