ನ್ಯೂಸ್ ನಾಟೌಟ್: ಸುಳ್ಯ ನಗರದ ಮೂಲಕ ಹಾದು ಹೋಗುವ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗೆ ಹೊಂಡ-ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ವಾಹನ ಸವಾರರು ಸರ್ಕಸ್ ಮಾಡಿಕೊಂಡೇ ಸವಾರಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ದಕ್ಷಿಣ ಕನ್ನಡ ತಮಿಳು ಸೇವಾ ಸಂಘ (ರಿ. ) ಸುಳ್ಯ ಇವರ ವತಿಯಿಂದ ಹೊಂಡ ಗುಂಡಿ ಮುಚ್ಚಿ ಶ್ರಮದಾನ ಮಾಡುವ ಕಾರ್ಯಕ್ರಮ ನಡೆಯಿತು.
ಈ ಶ್ರಮದಾನದಲ್ಲಿ ಹಲವಾರು ಮಂದಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಸಂಘದ ಸ್ಥಾಪಕ ಅಧ್ಯಕ್ಷ ಪೆರುಮಾಳ್ ಹಾಗು ಅಧ್ಯಕ್ಷ ಶರತ್, ಪ್ರ.ಕಾರ್ಯದರ್ಶಿ ಕಾರ್ತಿಕ್ ಗಣೇಶ್ ಕೊಡಿಯಲ್ ಬೈಲು, ರಾಮಕೃಷ್ಣ, ಶಶಿಕುಮಾರ್ ತ್ಯಾಗರಾಜ್ ಕಡಬ, ವಿಜಯಕುಮಾರ್ ಕಡಬ ಸಂಜಯ್ ಹಾಗು ಪುಷ್ಪರಾಜ್ ಹಾಜರಿದ್ದರು.
- +91 73497 60202
- [email protected]
- November 25, 2024 2:24 PM