ನ್ಯೂಸ್ ನಾಟೌಟ್ : ತನ್ನ ಬಳಿ ರಾಯಲ್ ಎನ್ಫೀಲ್ಡ್ ದ್ವಿಚಕ್ರ ವಾಹನ ಇಲ್ಲದಿರುವ ಬಗ್ಗೆ ಹತಾಶೆಗೊಂಡು ಪಿಜಿ ಆವರಣ ದಲ್ಲಿ ನಿಲುಗಡೆ ಮಾಡಿದ್ದ ಮೂರು ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾದ ಘಟನೆ ನಡೆದಿದೆ. ಆರೋಪಿಯನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ಪುಲಿತ್ (25) ಬಂಧಿತ. ಆರೋಪಿಯು ಸೆ.19ರ ಮುಂಜಾನೆ ವೇಣುಗೋಪಾಲ ನಗರದ ಎಚ್ ಎಂಟಿ ಲೇಔಟ್ನನ ಪಿಜಿವೊಂದರ ಆವರಣದಲ್ಲಿ ನಿಲುಗಡೆ ಮಾಡಿದ್ದ ರಾಯಲ್ ಎನ್ಫೀಲ್ಟ್ ಆಕ್ಟಿವಾ ಮತ್ತು ಪ್ಯಾಷನ್ ಪ್ರೋ ಬೈಕ್ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ಈ ಸಂಬಂಧ ಪಿಜಿ ನಿವಾಸಿ ದೀಪಾಂಕು ಆಗರ್ವಾಲ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ದೀಪಾಂಶು ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಿದ್ದ ಪೊಲೀಸರು, ಘಟನಾ ಸ್ಥಳದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ, ಸೆ.19ರಂದು ಮುಂಜಾನೆ ಸುಮಾರು 1.40ಕ್ಕೆ ಅಪರಿಚಿತ ವ್ಯಕ್ತಿ ಪಿಜಿ ಆವರಣಕ್ಕೆ ಬಂದಿದ್ದು, ರಾಯಲ್ ಎನ್ಫೀಲ್ಡ್ ದ್ವಿಚಕ್ರ ವಾಹನ ದಿಂದ ಪೆಟ್ರೋಲ್ ಸುರಿದುಕೊಂಡು ಬಳಿಕ ಆ ಪೆಟ್ರೋಲ್ ಅನ್ನು ದ್ವಿಚಕ್ರ ವಾಹನಗಳ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ಅದೇ ಬೆಂಕಿಯಲ್ಲಿ ಸಿಗರೇಟ್ ಹಚ್ಚಿಕೊಂಡು ಸ್ಥಳದಿಂದ ಪರಾರಿಯಾಗಿರುವುದು ಸೆರೆಯಾಗಿತ್ತು.