ನ್ಯೂಸ್ ನಾಟೌಟ್: ಹಿಂದೂ ಯುವತಿಗೆ ಬಸ್ ನಲ್ಲಿ ಕಿರುಕುಳ ನೀಡಿದ ಪ್ರಕರಣಕ್ಕೆ ಹಲವಾರು ತಿರುವುಗಳು ಸಿಗುತ್ತಿದೆ. ಇಂತಹ ಪ್ರಕರಣಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತದೆ. ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುತ್ತದೆ. ಪೊಲೀಸ್ ಇಲಾಖೆ ಇದೆಲ್ಲವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಕಾನೂನು ಉಲ್ಲಂಘಿಸುವವರು ಯಾರೇ ಆದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಸುಳ್ಯಕ್ಕೆ ಪುತ್ತೂರು ಡಿವೈಎಸ್ ಪಿ ಅರುಣ್ ನಾಗೇ ಗೌಡ ವಿಷಯ ತಿಳಿದ ತಕ್ಷಣ ಸುಳ್ಯಕ್ಕೆ ಆಗಮಿಸಿದ್ದಾರೆ. ಅಲ್ಲದೆ ಎಸ್ಪಿಯವರು ಕೂಡಾ ಬಂದು ತನಿಖೆಗೆ ಸಂಬಂಧಪಟ್ಟ ಮಾಹಿತಿ ಪಡೆದುಕೊಂಡಿದ್ದಾರೆ. ಮುಳ್ಳೇರಿಯಾ ಆಸ್ಪತ್ರೆಯಲ್ಲಿ ದಾಖಲಾಗಿರುವ ನಿಯಾಝ್ ನ ಹೇಳಿಕೆ ಪಡೆಯಲು ಸುಳ್ಯ ಮತ್ತು ಬೆಳ್ಳಾರೆ ಪೊಲೀಸರು, ಬೆಳ್ಳಾರೆ ಎಸ್ಐ ಈರಯ್ಯ ದೂಂತೂರು ನೇತೃತ್ವದಲ್ಲಿ ತೆರಳಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಇದೆಲ್ಲದರ ನಡುವೆ ಯುವಕನಿಗೆ ಹಲ್ಲೆ ನಡೆಯುವ ಮೊದಲೇ ಯುವಕನ ಅನುಚಿತ ವರ್ತನೆ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಆದರೆ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ, ಈ ಹಿನ್ನೆಲೆಯಲ್ಲಿ ಇಂತಹ ಘಟನೆ ನಡೆದಿದೆ ಅನ್ನುವ ಆರೋಪವೂ ಕೇಳಿ ಬಂದಿದೆ. ಆರೋಪ ಅಂತಿಮವಲ್ಲ, ಹಿರಿಯ ಪೊಲೀಸ್ ಅಧಿಕಾರಿಗಳು ಇದನ್ನೂ ಗಮನಕ್ಕೆ ತೆಗೆದುಕೊಂಡು ತನಿಖೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಬಸ್ ನಲ್ಲಿ ಯುವತಿ ಜೊತೆ ಅನುಚಿತವಾಗಿ ಯುವಕ ವರ್ತಿಸಿದ್ದಾನೆ, ಮೈ ಕೈ ಟೆಚ್ ಮಾಡಿದ್ದಾನೆ, ಸ್ವತಃ ಸಂತ್ರಸ್ಥ ಯುವತಿಯ ದೂರಿನಲ್ಲಿ ದಾಖಲಾಗಿದೆ. ಮುಂದೆ ಪ್ರಕರಣವನ್ನು ಪೊಲೀಸರು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.