ನ್ಯೂಸ್ ನಾಟೌಟ್: ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಕೇರಳದ ಕಾಸರಗೋಡು ಜಿಲ್ಲೆಯ ಬೋವಿಕ್ಕಾನದ ಸರಸ್ವತಿ ವಿದ್ಯಾಲದ ಸಹಯೋಗದೊಂದಿಗೆ ಇಲ್ಲಿನ ವಿದ್ಯಾಲಯದಲ್ಲಿ ಭಾನುವಾರ (ಸೆ. 22) ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಯಿತು.
ಶಿಬಿರವನ್ನು ಕೆ. ಶಶಿಧರ, IAS (Rtd) ಉದ್ಘಾಟಿಸಿದರು. ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡಾ. ಅನಿರುದ್ಧ ಅವರು, ಆರೋಗ್ಯದ ಬಗ್ಗೆ ಜನರಿಗೆ ತಿಳಿಸಿ ಎಲ್ಲರೂ ಯಾವುದೇ ಸಂಕೋಚ ಪಡದೆ ತಮ್ಮ ಕಾಯಿಲೆಗಳ ಬಗ್ಗೆ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವಂತೆ ಕಿವಿಮಾತು ಹೇಳಿದರು.
ಸಕ್ಷಮ ಜಿಲ್ಲಾ ದೃಷ್ಟಿ ವಿಭಾಗದ ಅಧ್ಯಕ್ಷ ಬಾಲನ್ ಮುಂಡಕೈ, ಕಾಸರಗೋಡಿನ ಸೈಕ್ಯಾಟ್ರಿಸ್ಟ್ ಡಾ. ಸುಜಯ ಪಾಂಡ್ಯನ್, ಸಕ್ಷಮ ರಾಜ್ಯ ಉಪಾಧ್ಯಕ್ಷ ಸಿ.ಸಿ. ಭಾಸ್ಕರನ್, ಸಕ್ಷಮ ಜಿಲ್ಲಾಧ್ಯಕ್ಷ ರವೀಂದ್ರನ್ ಚಾತಂಗೈ, ಸರಸ್ವತಿ ವಿದ್ಯಾಲಯ ಸಮಿತಿ ಅಧ್ಯಕ್ಷ ಮೋಹನನ್ ಅಮ್ಮಂಗೋಡು, ಸಂಘಟಕ ಸಮಿತಿಯ ಸುರೇಶ್ ನರಿಕೋಲ್ ಮತ್ತಿತರರಿದ್ದರು.
ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಜನರಲ್ ಮೆಡಿಸಿನ್, ಜನರಲ್ ಸರ್ಜರಿ ವಿಭಾಗದ ವೈದ್ಯರು, ಎಲುಬು, ಕಣ್ಣು, ಇಎನ್ಟಿ ಹಾಗೂ ಮಕ್ಕಳ ತಜ್ಞವೈದ್ಯರು, ಸ್ತ್ರೀರೋಗ ತಜ್ಞರು (ಒ.ಬಿ.ಜಿ.), ಶ್ವಾಸಕೋಶ ಸಂಬಂಧಿಸಿದ ರೋಗಗಳ ತಜ್ಞ ವೈದ್ಯರು, ಚರ್ಮರೋಗ ತಜ್ಞರು ಹಾಗೂ ಮನೋರೋಗ ವಿಭಾಗದ ತಜ್ಞವೈದ್ಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಹಲವಾರು ಮಂದಿ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಂಡರು.